Tuesday, June 23, 2026
Google search engine

Homeಸ್ಥಳೀಯಬೈರಮಂಗಲ ಚರ್ಚೆ ಆಹ್ವಾನಕ್ಕೆ ಆಕ್ರೋಶ : ಕುಮಾರಸ್ವಾಮಿಗೆ ಸಾಮಾನ್ಯ ಜ್ಞಾನವಿಲ್ಲ : ಹೆಚ್.ಸಿ ಬಾಲಕೃಷ್ಣ

ಬೈರಮಂಗಲ ಚರ್ಚೆ ಆಹ್ವಾನಕ್ಕೆ ಆಕ್ರೋಶ : ಕುಮಾರಸ್ವಾಮಿಗೆ ಸಾಮಾನ್ಯ ಜ್ಞಾನವಿಲ್ಲ : ಹೆಚ್.ಸಿ ಬಾಲಕೃಷ್ಣ

ಬೆಂಗಳೂರು :  ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಬದಲು ಬೈರಮಂಗಲದಲ್ಲಿ ರೈತರ ಸಮ್ಮುಖದಲ್ಲಿ ಚರ್ಚೆಗೆ ಬರುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಪತ್ರ ಬರೆದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ, ಕುಮಾರಸ್ವಾಮಿಗೆ ಸಾಮಾನ್ಯ ಜ್ಞಾನವಿಲ್ಲ. ಬಾಲಿಶ ವರ್ತನೆ.  ಬೈರಮಂಗಲದಲ್ಲಿ ಮಾರಾಮಾರಿ ಆದರೆ ಯಾರು ಹೊಣೆ? ನಾಳೆ ಕಾನೂನು ಸುವ್ಯವಸ್ಥೆ ಹಾಳಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಹೆಚ್ ಡಿಕೆ ಬೇರೆ ರೈತರ ಪರವಾಗಿ ಏಕೆ ಹೋರಾಟ ಮಾಡಲಿಲ್ಲ. ಬಿಡದಿಯಲ್ಲಿ ಮಾತ್ರ ನಿಮ್ಮ ಹೋರಾಟ ಯಾಕೆ?  ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ,  ಹಾಸನದಲ್ಲೂ ರೈತರು ಹೋರಾಟ ಮಾಡಿದ್ದಾರೆ. ಐಐಟಿಗೆ ಭೂಸ್ವಾಧೀನ ಮಾಡಿದ್ದಾರೆ ಮೊದಲು ಆ ಭೂಮಿ ಬಿಡಿ ಎಂದು ಹೆಚ್ ಸಿ ಬಾಲಕೃಷ್ಣ ಸಿಡಿಮಿಡಿಗೊಂಡರು.

ನಿಖಿಲ್ ಕುಮಾರಸ್ವಾಮಿ 5 ಎಕರೆ ಜಾಗ ಬಿಟ್ಟುಕೊಟ್ಟರೆ  ರೈತ ಹೋರಾಟಗಾರರಿಗೆ ಅಲ್ಲಿಯೇ ಸೈಟ್ ಕೊಡೋಣ ಬೇಕಾದರೇನಿಖಿಲ್ ಲೇಔಟ್ ಅಂತಾ ಹೆಸರಿಡೋಣ. ಇಡೀ ಏರಿಯಾಗೆ ನಿಖಿಲ್ ಲೇಔಟ್ ಅಂತ ಹೆಸರಿಡುತ್ತೇವೆ ಎಂದು ಹೆಚ್ ಸಿ ಬಾಲಕೃಷ್ಣ ಟಾಂಗ್ ಕೊಟ್ಟರು.

RELATED ARTICLES
- Advertisment -
Google search engine

Most Popular