Sunday, April 20, 2025
Google search engine

Homeರಾಜಕೀಯಕುಮಾರಸ್ವಾಮಿ ಜೊತೆ ದತ್ತಪೀಠಕ್ಕೆ ಬರಲಿ: ಸಿಎಂಗೆ ಸಿ.ಟಿ.ರವಿ ಮನವಿ

ಕುಮಾರಸ್ವಾಮಿ ಜೊತೆ ದತ್ತಪೀಠಕ್ಕೆ ಬರಲಿ: ಸಿಎಂಗೆ ಸಿ.ಟಿ.ರವಿ ಮನವಿ

ಚಿಕ್ಕಮಗಳೂರು: ಕುಮಾರಸ್ವಾಮಿ ಜೊತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯನವರು ದತ್ತಪೀಠಕ್ಕೆ ಬರಲಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಮನವಿ ಮಾಡಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂ ಎಂದು ಹೇಳಿಕೊಳ್ಳಲು ಗರ್ವ ಪಡಬೇಕು. ಸಮಾಜ ಇದನ್ನೇ ಕೇಳೋದು. ಮಾಜಿ ಸಿಎಂ ಹೆಚ್ ಡಿಕೆ ಹೇಳಿಕೆ ಸಿಎಂ ಸಿದ್ದರಾಮಯ್ಯನವರಿಗೂ ಮಾದರಿ. ನಾನು ಹಿಂದೂ ಅಲ್ವಾ, ನನ್ನ ಹೆಸರಲ್ಲೇ ಸಿದ್ರಾಮ ಇದ್ದಾನೆ ಎಂದಿದ್ದಾರೆ ಎಂದರು.

ನೀವು ಮಾಲೆ ಹಾಕಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಬಲ ಬರಲಿದೆ. ನೀವು ಮಾಲೆ ಹಾಕಿದ ಮೇಲೆ ಜಮೀರ್ ಅವರು ಮಾಲೆ ಹಾಕೇ ಹಾಕುತ್ತಾರೆ. ಆಗ 5 ದಶಕದ ಹೋರಾಟಕ್ಕೆ ಬಲ ಬರುತ್ತೆ. ಸತ್ಯವನ್ನು ಎತ್ತಿ ಹಿಡಿದಂತಾಗುತ್ತೆ. ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೆ ಏಕೆ ಹೆದರಬೇಕು ಎಂದು ಪ್ರಶ್ನಿಸಿದರು.

ಯಾರೂ ಎಲೆಕ್ಷನ್ ಟೈಂ ಹಿಂದೂಗಳಾಗಬಾರದು. ಜೀವನ ಪರ್ಯಂತ ಹಿಂದೂಗಳಾಬೇಕು. ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು, ಮುಂದಕ್ಕೆ ನೋಡಬೇಕು. ಸಿದ್ದರಾಮಯ್ಯನವರು ಬರಲಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular