Sunday, April 20, 2025
Google search engine

Homeರಾಜ್ಯಸಚಿವ ಕೆ.ಎನ್.ರಾಜಣ್ಣರ ಕುಟುಂಬದಿಂದ ರಾಮ ಜಪ: ಶ್ರೀರಾಮ ದೇವಸ್ಥಾನದಲ್ಲಿ  ನವಗ್ರಹ ಹೋಮ- ಹವನ

ಸಚಿವ ಕೆ.ಎನ್.ರಾಜಣ್ಣರ ಕುಟುಂಬದಿಂದ ರಾಮ ಜಪ: ಶ್ರೀರಾಮ ದೇವಸ್ಥಾನದಲ್ಲಿ  ನವಗ್ರಹ ಹೋಮ- ಹವನ

ತುಮಕೂರು: ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೆ.ಎನ್. ರಾಜಣ್ಣ ಕುಟುಂಬದಿಂದ ಹೋಮ- ಹವನ ನಡೆಸಲಾಗಿದೆ.

ಮಧುಗಿರಿ ತಾಲೂಕಿನ ಕಿತ್ತಾಗಳಿಯ ಶ್ರೀರಾಮ ದೇವಸ್ಥಾನದಲ್ಲಿ  ನವಗ್ರಹ, ಗಣಪತಿ, ಶ್ರೀರಾಮ ಹೋಮ ನಡೆಸಿದ್ದಾರೆ.

ಕೆ.ಎನ್.ರಾಜಣ್ಣರ ಪತ್ನಿ ಶಾಂತಲಾ ಹಾಗೂ ಕುಟುಂಬ ಸದಸ್ಯರು ಹೋಮದಲ್ಲಿ ಭಾಗಿಯಾಗಿದ್ದಾರೆ. ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಉಪಸ್ಥಿತರಿದ್ದಾರೆ. ಕೆಲಹೊತ್ತಲ್ಲೇ ಹೋಮದಲ್ಲಿ ಕೆ.ಎನ್ ರಾಜಣ್ಣ ಭಾಗಿಯಾಗಲಿದ್ದಾರೆ.

ಶ್ರೀರಾಮನನ್ನು ಟೆಂಟ್ ಹೌಸ್ ನಲ್ಲಿ ಇದ್ದ ಗೊಂಬೆ ಎಂದಿದ್ದ ಕೆ‌.ಎನ್ ರಾಜಣ್ಣ ಈಗ ಶ್ರೀರಾಮನ ಹೋಮ ಮಾಡಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

RELATED ARTICLES
- Advertisment -
Google search engine

Most Popular