Sunday, April 20, 2025
Google search engine

Homeರಾಜ್ಯಬಿಜೆಪಿಯವರು ೩ ಕ್ಷೇತ್ರಗಳಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದ್ದರು: ಸಚಿವ ಎಂ.ಬಿ ಪಾಟೀಲ್

ಬಿಜೆಪಿಯವರು ೩ ಕ್ಷೇತ್ರಗಳಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದ್ದರು: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಬಿಜೆಪಿಯವರು ೩ ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದರು. ಇದೀಗ ಜನರು ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೩ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆಯಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ೧೮ ಸಾವಿರ ಲೀಡ್ ಇದೆ. ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಈ ೩ ಕ್ಷೇತ್ರದಲ್ಲಿಯೂ ನಾವು ಗೆಲ್ಲುತ್ತೇವೆ ಎಮದು ವಿಶ್ವಾಸ ವ್ಯಕ್ತಪಡಿಸಿದರು.

ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೊಮ್ಮಾಯಿ ವಿರುದ್ದ ಅಲ್ಪಸಂಖ್ಯಾತ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದರು. ಆದರೆ ಅದೇ ಅಲ್ಪಸಂಖ್ಯಾತ ಅಭ್ಯರ್ಥಿಯ ವಿರುದ್ಧ ಅಲ್ಲಾಡುತ್ತಿದ್ದಾರೆ. ನಮ್ಮ ಪಕ್ಷ ಎಲ್ಲಾ ಜಾತಿ ಧರ್ಮಗಳಿಗೆ ಅವಕಾಶ ಕೊಡುತ್ತದೆ. ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತ ವೋಟ್ ನಮಗೆ ಸಹಕಾರ ಆಗಿದೆ. ಮೂರು ಕ್ಷೇತ್ರದಲ್ಲಿ ೧ ಕ್ಷೇತ್ರ ಕೊಡುವ ಚರ್ಚೆ ಆಗಿತ್ತು. ಚನ್ನಪಟ್ಟಣ ಯೋಗೇಶ್ವರ್ ಬರುವುದು ಯಾರಿಗೂ ಗೊತ್ತಿಲ್ಲ. ಎಲ್ಲಾ ಲೆಕ್ಕಾಚಾರ ನೋಡಿ ಟಿಕೆಟ್ ನೀಡಲಾಗಿದೆ ಎಂದರು.

ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅನುಭವ, ಅವರ ವೋಟು ಹಾಗೂ ಕಾಂಗ್ರೆಸ್ ವೋಟ್‌ನಿಂದ ಗೆಲ್ಲುತ್ತಿದ್ದಾರೆ. ಜೆಡಿಎಸ್ ಅವರು ಪದೇ ಪದೇ ಅವರು ಕುಟುಂಬಕ್ಕೆ ಟಿಕಟ್ ಕೊಡುತ್ತಿರುವುದು ವಿರೋಧ ಆಗಿರಬಹುದು. ದೇವೇಗೌಡರು ಸರ್ಕಾರ ಕಿತ್ತು ಒಗೆಯುತ್ತೇನೆ ಎಂದಿದ್ದರು. ಆದರೆ ಸರ್ಕಾರವನ್ನ ಯಾರಿಂದಲೂ ಕಿತ್ತು ಒಗೆಯಲು ಸಾಧ್ಯವಿಲ್ಲ. ಜನರು ಅದನ್ನ ನಿರ್ಧಾರ ಮಾಡುತ್ತಾರೆ. ತಮ್ಮದೇ ಕುಟುಂಬದ ಅಭ್ಯರ್ಥಿ ಹಾಕಿರುವುದರಿಂದ ಜನ ನೋಡಿ ಮತ ಹಾಕಿದ್ದಾರೆ. ನಮ್ಮ ಪಕ್ಷದ ನಾಯಕರು ಒಟ್ಟಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular