Friday, August 29, 2025
Google search engine

Homeರಾಜ್ಯದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ: ಬಿಜೆಪಿ ವಿರೋಧ ಖಂಡನೀಯ : ಬಿ.ಆರ್. ಪಾಟೀಲ

ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ: ಬಿಜೆಪಿ ವಿರೋಧ ಖಂಡನೀಯ : ಬಿ.ಆರ್. ಪಾಟೀಲ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಅವರನ್ನು ಸರ್ಕಾರ ಆಹ್ವಾನಿಸಿದೆ. ಬಾನು ಮುಷ್ತಾಕ್‌ ಅವರು ಜಾಗತಿಕ ಮಟ್ಟದ ಪ್ರಶಸ್ತಿ ಪಡೆದು ಕರ್ನಾಟಕದ ಗೌರವವನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಇದನ್ನು ಸಹಿಸದ ಕೋಮು ಸೌಹಾರ್ದತಗೆ ಧಕ್ಕೆ ತರುವ ಉದ್ದೇಶದಿಂದ ಬಿಜೆಪಿ ವಿನಾಕಾರಣ ಧಾರ್ಮಿಕ ವಿಷಯಗಳನ್ನು ಮುಂದೊಡ್ಡಿ ಒಂದು ಸಮುದಾಯಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

ದೇಶದ ಪ್ರತಿಯೊಬ್ಬ ನಾಗರೀಕನಿಗೂ ತಮ್ಮಆಚಾರ ವಿಚಾರ ನಂಬಿಕೆಗಳನ್ನು ಪಾಲಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಬಿಜೆಪಿಯ ಹೇಳಿಕೆಗಳಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅವಮಾನವಾಗುತ್ತದೆ. ಈ ಹಿಂದೆ ಕವಿ ಕೆ.ಎಸ್‌.ನಿಸಾರ್‌ಅಹ್ಮದ್ ಅವರು ದಸರಾ ಉತ್ಸವ ಉದ್ಘಾಟಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ  ಮಳೆಯಿಂದ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ದಲಿತ, ಕಾರ್ಮಿಕ, ಬಡವ ಹಾಗೂ ಹಿಂದುಳಿದವರ ಸಮಸ್ಯೆಗಳನ್ನು ಕುರಿತು  ಬಿಜೆಪಿ ಮಾತನಾಡುವುದೇ ಇಲ್ಲ. ಸದಾ ಜಾತಿ ಮತ್ತು ಧರ್ಮದ ವಿಷಯಗಳನ್ನು ಮುನ್ನೆಲೆಗೆ ತಂದು ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತದೆ. ಇಂತಹ ಕೋಮುವಾದಿ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಶಾಸ್ತಿ ಮಾಡಬೇಕು ಎಂದು ಬಿ.ಆರ್.ಪಾಟೀಲ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular