Saturday, January 17, 2026
Google search engine

Homeರಾಜ್ಯಸುದ್ದಿಜಾಲಹುಣಸೂರು ಉಪವಿಭಾಗ ಅಧಿಕಾರಿಯಾಗಿ ಕಾವ್ಯ ರಾಣಿ ಅಧಿಕಾರ ಸ್ವೀಕಾರ

ಹುಣಸೂರು ಉಪವಿಭಾಗ ಅಧಿಕಾರಿಯಾಗಿ ಕಾವ್ಯ ರಾಣಿ ಅಧಿಕಾರ ಸ್ವೀಕಾರ

ಹುಣಸೂರು : ದಾವಣಗೆರೆ ಮೂಲದ ಕೆಎಎಸ್ ಅಧಿಕಾರಿ ಕೆ.ವಿ. ಕಾವ್ಯರಾಣಿ ಹುಣಸೂರು ಉಪವಿಭಾಗ ಆಧಿಕಾರಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿದರು. ನಂತರ ಮಾತನಾಡಿದ ಅವರು, ಹುಣಸೂರು ಉಪವಿಭಾಗ ಕೇಂದ್ರವಾಗಿದ್ದು, ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಕಾಡಂಚಿನ ಪ್ರದೇಶವಾಗಿದೆ. ಈ ಭಾಗದಲ್ಲಿ ದಲಿತರು, ಗಿರಿಜನರು, ಶ್ರಮಿಕರು ಹಾಗೂ ರೈತಾಪಿ ವರ್ಗವು ಹೆಚ್ಚಾಗಿದ್ದು, ಕಂದಾಯ ಇಲಾಖೆ ಸೇರಿದಂತೆ ಸಾರ್ವಜನಿಕ ಜ್ವಲಂತ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ತಾಲೂಕಿನ ಜನತೆಯ ಸಹಕಾರ,ಸಲಹೆ, ಸೂಚನೆ ಇದ್ದರೆ. ನಿಮ್ಮೊಂದಿಗೆ ಸದಾ ಇದ್ದು, ಯಾವುದೇ ಸಮಸ್ಯೆ ಇದ್ದರೂ ಬಗೆ ಹರಿಸುವುದಾಗಿ ತಿಳಿಸಿದರು.

ಅವರೊಂದಿಗೆ ತಹಶೀಲ್ದಾರ್ ಮಂಜುನಾಥ್, ಗ್ರೇಡ್ 2 ಯಧು ಗಿರೀಶ್, ಉಪ ತಹಶೀಲ್ದಾರ್ ಶ್ರೀಪಾದ್, ಶಿವಕುಮಾರ್ ಇದ್ದರು.

RELATED ARTICLES
- Advertisment -
Google search engine

Most Popular