Thursday, February 5, 2026
Google search engine

Homeಅಪರಾಧಸ್ಕೂಟರ್ ಗೆ ಬಸ್ ಡಿಕ್ಕಿ; ಯುವತಿ ಸಾವು

ಸ್ಕೂಟರ್ ಗೆ ಬಸ್ ಡಿಕ್ಕಿ; ಯುವತಿ ಸಾವು

ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹಸವಾರೆಯೊಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಮಂಗಳೂರಿನ ನಂತೂರಿನಲ್ಲಿ ನಡೆದಿದೆ. ದೀಪ್ತಿ (26) ಮೃತಪಟ್ಟವರು. ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಬಸ್ ಮತ್ತು ಸ್ಕೂಟರ್ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದವು. ನಂತೂರು ಬಸ್‌ ನಿಲ್ದಾಣದ ಬಳಿ ಸ್ಕೂಟರ್ ಗೆ ಬಸ್ ಡಿಕ್ಕಿಯಾದಾಗ ಸ್ಕೂಟರ್ ಬಸ್ ನಡಿ ಬಿದ್ದು ಸಹಸವಾರೆಯ ಮೇಲೆ ಬಸ್ ನ ಟೈರ್ ಹರಿದು ಹೋಗಿತ್ತು. ಪರಿಣಾಮ ದೀಪ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular