Thursday, February 5, 2026
Google search engine

Homeರಾಜ್ಯಗಡಿಯಾರ್ ಚಾರಿಟಿ ಫೌಂಡೇಶನ್ ನಿಂದ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ಗಡಿಯಾರ್ ಚಾರಿಟಿ ಫೌಂಡೇಶನ್ ನಿಂದ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ಗಡಿಯಾರ್ ಗ್ರೂಪ್ ಆಪ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗಡಿಯಾರ್ ಚಾರಿಟಿ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಇಬ್ರಾಹಿಂ ಗಡಿಯಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಾರ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಿದರು. ಇದೇ ವೇಳೆ ಅವರು ಅಂಗನವಾಡಿಗೆ ಉಚಿತವಾಗಿ ಬಣ್ಣ ಬಳಿಯುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಗಡಿಯಾರದ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕರು, ಗಡಿಯಾರ ಮಸೀದಿಯ ಅಧ್ಯಕ್ಷ ರಿಯಾಝ್ ಕಲ್ಲಾಜೆ,
ಸ್ಥಳೀಯ ಸಂಘಟನೆಯ ಮುಖಂಡರಾದ ಅಝೀಝ್, ಹಂಝ, ರಫೀಕ್ ಬಾವಾ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular