Thursday, February 12, 2026
Google search engine

Homeಅಪರಾಧಬೆಳಗಾವಿ: ನದಿಯಲ್ಲಿ 3 ಬೈಕ್ ಪತ್ತೆ; ಸಾಕ್ಷ್ಯ ನಾಶಕ್ಕೆ ಎಸೆದಿರುವ ಶಂಕೆ.

ಬೆಳಗಾವಿ: ನದಿಯಲ್ಲಿ 3 ಬೈಕ್ ಪತ್ತೆ; ಸಾಕ್ಷ್ಯ ನಾಶಕ್ಕೆ ಎಸೆದಿರುವ ಶಂಕೆ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಯಾನಗರ ಸೇತುವೆ ಬಳಿ ಬುಧವಾರ, ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ಗಳು ಪತ್ತೆಯಾಗಿವೆ

KA25 G-1459, KA24 J-7907 ಸಂಖ್ಯೆಯ ಎರಡು ಹಾಗೂ ನಂಬರ್ ಪ್ಲೇಟ್ ಇಲ್ಲದ ಇನ್ನೊಂದು ಬೈಕ್‌ ಪತ್ತೆಯಾಗಿದೆ. ಬೈಲಹೊಂಗಲ ಪೊಲೀಸರು ಅವುಗಳನ್ನು ಹೊರಕ್ಕೆ ತಂದರು.

ಸವದತ್ತಿ ಪಟ್ಟಣದಲ್ಲಿ 2025ರ ಡಿ.22ರಂದು ಮೂರು ಬೈಕುಗಳಲ್ಲಿ ಬಂದಿದ್ದ 9 ಮಂದಿ ಚಿನ್ನದ ಅಂಗಡಿಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಇದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

‘ಬಹುಶಃ ಈ ಮೂರೂ ಬೈಕುಗಳನ್ನೇ ಕೃತ್ಯಕ್ಕೆ ಬಳಸಿ ಸಾಕ್ಷ್ಯ ನಾಶಕ್ಕಾಗಿ ನದಿಯಲ್ಲಿ ಎಸೆದಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular