Thursday, February 19, 2026
Google search engine

Homeರಾಜ್ಯಸಿಎಂ ಕಪ್‌ ಷಟಲ್‌ ಬ್ಯಾಡ್ಮಿಂಟನ್‌ ಟೂರ್ನಿ ; ಲೋಗೋ ಬಿಡುಗೆಡೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಕಪ್‌ ಷಟಲ್‌ ಬ್ಯಾಡ್ಮಿಂಟನ್‌ ಟೂರ್ನಿ ; ಲೋಗೋ ಬಿಡುಗೆಡೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : 9ಡ್ರೀಮ್ಸ್‌ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ವಿನೂತನ ಮಾದರಿಯ 2026ರ ಸಿಎಂ ಕಪ್‌ ಷಟಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅಧಿಕೃತ ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅನಾವರಣಗೊಳಿಸಿದ್ದಾರೆ.

ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಕಪ್‌ 2026ರ ಲೋಗೋ ಬಿಡುಗಡೆ ಮಾಡಿದ ಅವರು, ಟೂರ್ನಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ಎಸಿಪಿ ಪರಮೇಶ್ವರ್‌, ಚಿತ್ರರಂಗದ ಇಮ್ರಾನ್‌ ಸರ್ದಾರಿಯಾ, ಕವಿತಾ ಲಂಕೇಶ್‌, ಸಿಎಂ ಕಪ್‌ ಆಯೋಜಕರಾದ ಮಂಜುನಾಥ್‌ ಗೌಡ, ಸುನೀಲ್‌ ಧರ್ಮಸ್ಥಳ, ಸನತ್‌ ರೈ, ತೇಜಸ್‌ ಪವಾಸ್‌, ಬಾಲು, ಆಶಿಕ್‌ ಶೆಟ್ಟಿ ಇತರರಿದ್ದರು.

ಟೂರ್ನಿಗೂ ಮುನ್ನ ಜನವರಿ 25ರಂದು ಪ್ಯಾಲೆಸ್ ಗ್ರೌಂಡ್ಸ್‌ನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಆಟಗಾರರ ಆಯ್ಕೆ ಹಾಗೂ ಜೆರ್ಸಿ ಅನಾವರಣ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ, ಡಿಜಿಪಿ ಅಲೋಕ್ ಕುಮಾರ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಂಡಗಳ ಜೆರ್ಸಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದರು.

RELATED ARTICLES
- Advertisment -
Google search engine

Most Popular