Tuesday, February 24, 2026
Google search engine

Homeಅಪರಾಧಹುಣಸೂರಿನಲ್ಲಿ 10 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ : ಚಿನ್ನ ರಿಕವರಿ ಅಸಾಧ್ಯ

ಹುಣಸೂರಿನಲ್ಲಿ 10 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ : ಚಿನ್ನ ರಿಕವರಿ ಅಸಾಧ್ಯ

ಮೈಸೂರು : ಹುಣಸೂರು ಪಟ್ಟಣದಲ್ಲಿ ಚಿನ್ನದಂಗಡಿಯಲ್ಲಿ ದರೋಡೆ ಮಾಡಿದ್ದ ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರು ನೇಪಾಳದಲ್ಲಿ ಮಾರಾಟ ಮಾಡಿದ್ದಾರೆ. ಪ್ರಕರಣ ಈಗ ಪೊಲೀಸರಿಗೆ ತಲೆನೋವಾಗಿದೆ.

8 ಕೆಜಿ ಚಿನ್ನ ಕದ್ದವರು ಸಿಕ್ಕರೂ ಚಿನ್ನ ಮಾತ್ರ ಸಿಕ್ಕಿಲ್ಲ. ಸುಮಾರು 10 ಕೋಟಿ ಬೆಲೆಯ ಚಿನ್ನ ರಿಕವರಿಗೆ ಮೈಸೂರು ಜಿಲ್ಲಾ ಪೊಲೀಸರು ಎಳ್ಳು ನೀರು ಬಿಡುವ ಸಾಧ್ಯತೆ ಇದೆ. ಪ್ರಕರಣದ ಮಾಸ್ಟರ್ ಮೈಂಡ್ ಸೇರಿ ನಾಲ್ವರು ಆರೋಪಿಗಳ ಸೆರೆಯಾಗಿದೆ.

ಅಂತರರಾಜ್ಯ ಕಳ್ಳರಿಂದ ಕದ್ದ ಚಿನ್ನ ಮಾರಾಟ ಆಗಿದ್ದು ಅಂತರರಾಷ್ಟ್ರ ಮಟ್ಟದಲ್ಲಿ. ಹೈಟೆಕ್ ತಂತ್ರಜ್ಞಾನದ ಜೊತೆಗೆ ನಡೆದಿದ್ದ ದರೋಡೆ ಇದಾಗಿದೆ. ದರೋಡೆಗೆ ಮಾತ್ರವಲ್ಲ, ಚಿನ್ನ ವಿಲೇವಾರಿಗೂ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಹುಣಸೂರಿನಲ್ಲಿ ಕದ್ದ ಚಿನ್ನವನ್ನು ನೇಪಾಳದಲ್ಲಿ ಮಾರಾಟ ಮಾಡಲಾಗಿದೆ. ಈ ಸಂಬಂಧ ಪೊಲೀಸರಿಗೆ ಮಾಹಿತಿ ಸಿಕ್ಕರೂ ನೇಪಾಳಕ್ಕೆ ಹೋಗಿ ರಿಕವರಿ ಮಾಡಲು ಆಗದ ಪರಿಸ್ಥಿತಿ ಇದೆ.

ಚಿನ್ನ ಕದ್ದು ಬೇರೆ ದೇಶಕ್ಕೆ ಚಿನ್ನ ವಿಲೇವಾರಿ ಮಾಡಲಾಗಿದೆ. ಹೀಗಾಗಿ, ಹುಣಸೂರು ಆಭರಣದ ಅಂಗಡಿ ಕಳ್ಳತನ ಮುಗಿದ ಅಧ್ಯಾಯ ಎಂಬ ಮನಸ್ಥಿತಿಗೆ ಪೊಲೀಸರು ಬಂದಿದ್ದಾರೆ.

RELATED ARTICLES
- Advertisment -
Google search engine

Most Popular