ರಾಜ್ಯಧರ್ಮ, ಮಂಗಳೂರು ಬ್ಯೂರೋ
ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿದೇಶದಿಂದ ಹಿಂತಿರುಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲೇ ಬಂಧಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ವಿಟ್ಲ ಪೊಲೀಸ್ ಠಾಣೆಯ ಅಕ್ರ 193/2019 ಕಲಂ 427.504.394.341 lpc ಮತ್ತು 2(A)Prevention of Destruction and Loss of Property Act ಪ್ರಕರಣದಲ್ಲಿ ಆರೋಪಿಯಾಗಿ ಸುಮಾರು ಎರಡು ವರ್ಷದಿಂದ ಮಾನ್ಯ ಕೋರ್ಟ್ ಗೆ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ, ಕನ್ಯಾನ ನಿವಾಸಿ ಇಬ್ರಾಹಿಂ ಬಾತೀಸ್ ಎಂಬಾತನನ್ನು ವಿದೇಶದಿಂದ ಮರಳಿ ಬರುವಾಗ, ಮಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಶನ್ ವಿಭಾಗದ ಸಹಕಾರದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಠಾಣಾ HC 668 ಮತ್ತು PC 2465 ರವರು ದಸ್ತಗಿರಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿತನಿಗೆ ದಿನಾಂಕ 07.03.2026 ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.



