Friday, February 27, 2026
Google search engine

Homeರಾಜ್ಯಸುದ್ದಿಜಾಲಮನೆಗಳಲ್ಲಿ ಸುಸ್ಥಿರತೆ ರೂಢಿಸಿಕೊಂಡರೆ, ಸಮಾಜ ನೈಸರ್ಗಿಕವಾಗಿ ಸುಸ್ಥಿತರತೆಯೆಡೆಗೆ ಸಾಗುತ್ತದೆ : ಸುತ್ತೂರು ಶ್ರೀ

ಮನೆಗಳಲ್ಲಿ ಸುಸ್ಥಿರತೆ ರೂಢಿಸಿಕೊಂಡರೆ, ಸಮಾಜ ನೈಸರ್ಗಿಕವಾಗಿ ಸುಸ್ಥಿತರತೆಯೆಡೆಗೆ ಸಾಗುತ್ತದೆ : ಸುತ್ತೂರು ಶ್ರೀ

ಮೈಸೂರು : ಮನೆಗಳಲ್ಲಿ ಸುಸ್ಥಿರತೆಯನ್ನು ರೂಢಿಸಿಕೊಳ್ಳುತ್ತಾ ಬಂದರೆ ಸಮಾಜ ನೈಸರ್ಗಿಕವಾಗಿ ಸುಸ್ಥಿತರತೆಯೆಡೆಗೆ ಸಾಗುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲುಂ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲುಂ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ಗೃಹ ವಿಜ್ಞಾನ ಸಮ್ಮೇಳನ-2026 `ಸ್ಥಿತಿಸ್ಥಾಪಕ ಮತ್ತು ಪರಿವರ್ತಕ ಗೃಹ ವಿಜ್ಞಾನಕ್ಕಾಗಿ ಪರಿಸರ ವಿಧಾನಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವೀಯತೆ ಪ್ರಸ್ತುತದಲ್ಲಿ ಅಡ್ಡದಾರಿ ಹಿಡಿಯುತ್ತಿರುವ ಕಾಲಘಟ್ಟದಲ್ಲಿ ಪರಿಸರದ ಅವನತಿ, ಹವಾಮಾನ ವೈಪರಿತ್ಯ, ನೈಸರ್ಗಿಕ ಸಂಪನ್ಮೂಲಗಳ ಕೊರತೆಯ ಸಂದರ್ಭದಲ್ಲಿ ವಿಜ್ಞಾನ ಮತ್ತು ಪ್ರಯೋಗಗಳ ಜ್ಞಾನದ ವ್ಯಾಪ್ತಿಯು ಪಠ್ಯಗಳ ಮೂಲಕ ವಿಕಸನವಾಗಬೇಕು ಎಂದರು.

ಜ್ಞಾನ ಬುದ್ಧಿವಂತಿಕೆಯಾಗಿ ಬದಲಾಗಿ, ಬುದ್ಧಿವಂತಿಕೆ ಕ್ರಿಯಾತ್ಮಕವಾಗುತ್ತದೆ. ಇದರಿಂದಾಗಿ ಸಮಾಜಕ್ಕೆ ಸಾಕಷ್ಟು ಅನುಕೂಲಗಳನ್ನು ದೊರೆಯುತ್ತದೆ. ಆಹಾರ ವಿಜ್ಞಾನ ಈ ಎಲ್ಲ ಬದಲಾವಣೆಯಲ್ಲಿ ಹೆಚ್ಚು ಪರಿಣಾಮಾತ್ಮಕ ಪಾತ್ರವಹಿಸಿದೆ. ವಿಜ್ಞಾನದ ಮೂಲಕ ಎಲ್ಲವನ್ನು ಕೂಡಿಸುವ, ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತದೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಸುಸ್ಥಿರತೆ ಒಂದು ಜವಾಬ್ದಾರಿ. ಇದಕ್ಕೆ ಸ್ಥಿತಿಸ್ಥಾಪಕತ್ವವು ಪರಿಕಲ್ಪನೆಯೂ ಸಹ ಅವಶ್ಯಕವಾಗಿದೆ. ಬದಲಾವಣೆಯೆಡೆಗೆ ಪ್ರಪಂಚವು ನಿತ್ಯವು ಸಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ನಮ್ಮ ಸಮುದಾಯಗಳಲ್ಲಿ ದೈನಂದಿನ ಜೀವನದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಾಗಿರಬೇಕು. ಸಮಾಜದ ಬದಲಾವಣೆಯಲ್ಲಿ ಗೃಹ ವಿಜ್ಞಾನವು ವಿಶಿಷ್ಟ ಮತ್ತು ಶಕ್ತಿಯುತವಾಗಿ ಸ್ಥಾನವನ್ನು ಪಡೆದುಕೊಂಡಿದೆ. ಇದು ವಿಜ್ಞಾನ ಮತ್ತು ಸವಾಜವನ್ನು ಬೆಸೆಯುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲುಂದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಎಸ್.ಅಲೂರು, ಕೊಯಮತ್ತೂರಿನ ಅವಿನಾಶಿಲಿಂಗಂ ಗೃಹ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಂಸ್ಥೆ ಮಹಿಳಾ ವಿವಿ ಕುಲಪತಿ ಪ್ರೊ.ವಿ.ಭಾರತಿ ಹರಿಶಂಕರ್, ಸಿಎಫ್‍ಟಿಆರ್‌ಐ ವಾಜಿ ನಿರ್ದೇಶಕ ಡಾ.ವಿ.ಪ್ರಕಾಶ್, ಮೈಸೂರು ವಿವಿ ಕುಲಸಚಿವೆ ಎಂ.ಕೆ.ಸವಿತಾ, ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್‍ಕುಮಾರ್, ಮೈಸೂರು ವಿವಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಕಮಲ, ಮುಕ್ತ ವಿವಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಅನಿತಾ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular