Wednesday, March 4, 2026
Google search engine

Homeಸ್ಥಳೀಯಶಾಸಕ ಡಿ.ರವಿಶಂಕರ್ ರಿಂದ ಗ್ರಾಮ ಅಭಿವೃದ್ಧಿಗೆ ಚಾಲನೆ : ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ...

ಶಾಸಕ ಡಿ.ರವಿಶಂಕರ್ ರಿಂದ ಗ್ರಾಮ ಅಭಿವೃದ್ಧಿಗೆ ಚಾಲನೆ : ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಭರವಸೆ

ಕೆ.ಆರ್.ನಗರ : ತಾಲೂಕಿನ ಮಂಚನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡುವುದರ ಜತೆಗೆ ಕ್ಷೇತ್ರದ‌ ಏಳಿಗೆಗೂ ಉತ್ತಮ ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ಗ್ರಾಮ ಪರಿಮಿತಿ ರಸ್ತೆಗಳ ಕಾಂಕ್ರೀಟೀಕರಣಕ್ಕೆ 1 ಕೋಟಿ ರೂಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಇಲ್ಲಿನ‌ ಜನರ ಬಹುದಿನಗಳ ಬೇಡಿಕೆಯಾಗಿರುವ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ಪಂಚಾಯತ್ ರಾಜ್ ಇಲಾಖೆಯಿಂದ ಮತ್ತೆ 5 ಕೋಟಿ ರೂ ಅನುದಾನ ಒದಗಿಸುವ ಭರವಸೆ ನೀಡಿದ ಅವರು ಈ ಸಂಬಂದ ಈಗಾಗಲೇ ಪೂರಕ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಹಣ ಬಿಡುಗಡೆಯಾಗುವುದು ಮಾತ್ರ ಬಾಕಿಯಿದೆ ಎಂದರು.ನಿರ್ಮಾಣ ಹಂತದಲ್ಲಿರುವ ನಿರ್ವಾಣಸ್ವಾಮಿ ದೇವಾಲಯದ ಮುಂದುವರಿದ‌ ಕಾಮಗಾರಿಗೆ 10 ಲಕ್ಷ ನೀಡಿ ಕೆಲಸಕ್ಕೆ ಚಾಲನೆ ನೀಡಲಾಗಿದ್ದು ಅದರೊಂದಿಗೆ ಸ್ಥಗಿತಗೊಂಡಿರುವ ಆಂಜನೇಯ ಸ್ವಾಮಿ ದೇವಾಲಯದ‌ ಮುಂದುವರೆದ ಕಾಮಗಾರಿಗೆ ಮತ್ತೆ 5 ಲಕ್ಷ ನೀಡಿ ಕೆಲಸ‌ ಪೂರ್ಣಗೊಳಿಸಿ ತ್ವರಿತವಾಗಿ ದೇವಾಲಯ ಉದ್ಘಾಟನೆ ಮಾಡುವುದಾಗಿ ಪ್ರಕಟಿಸಿದರು.

ಗ್ರಾಮದ ಕೆಲವು ದಿನಸಿ ಮತ್ತು ಇತರ ಅಂಗಡಿ ಹಾಗೂ ಟೀ ಹೋಟೆಲ್ ಗಳಲ್ಲಿ‌ ಮಧ್ಯ ಮಾರಾಟ ಮಾಡುತ್ತಿರುವುದರಿಂದ ಯುವಕರು ದುಶ್ಚಟಕ್ಕೀಡಾಗುತ್ತಿದ್ದಾರೆ ಎಂದು ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿದ್ದು ಈ ಸಂಬಂಧ ನಾನು ಅಧಿಕಾರಿಗಳ ಸಭೆ ಕರೆದು ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತೇನೆ ಎಂದು ನುಡಿದರು.
ಗ್ರಾಮದ ಕೆರೆಯ ಹೂಳೆತ್ತಿಸಿ ಜತೆಗೆ ಸ್ಮಶಾನವನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿದ ಡಿ.ರವಿಶಂಕರ್ ನನ್ನ ಅಧಿಕಾರದ ಅವಧಿಯಲ್ಲ ಯಾವುದೇ ಪಕ್ಷಪಾತ ಮಾಡದೆ ಉತ್ತಮವಾಗಿ ಕೆಲಸ ನಿರ್ವಹಿಸುವ ಭರವಸೆ ನೀಡಿದರು.

ಆನಂತರ ಶಾಸಕರು ಮಾರಗೌಡನಹಳ್ಳಿಯ ಡಾ. ಬಾಬು ಜಗಜೀವನ್ ರಾಂ ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿರುವ ಕಾಲ ಬೈರವೇಶ್ವರ ದೇವಾಲಯದ ಕಾಮಗಾರಿಗೆ ಚಾಲನೆ ನೀಡಿ ಅಡಗೂರು ಮಾರಗೌಡನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೇರವೇರಿಸಿದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಚಿಕ್ಕಹನಸೋಗೆ ಸಿ.ಜೆ.ಪಾಲಾಕ್ಷ ಮಾತನಾಡಿ ಶಾಸಕ ಡಿ.ರವಿಶಂಕರ್ ಅವರು ಎಂದಿಗೂ ದ್ವೇಷ ಮತ್ತು ಜಾತಿ ರಾಜಕಾರಣ ಮಾಡದೆ ಇತರ ಚುನಾಯಿತ ಜನ. ಪ್ರತಿನಿಧಿಗಳಿಗೆ ಮಾದರಿಯಾಗಿದ್ದು ಇಂತಹ ಯುವ ನಾಯಕನನ್ನು ಕ್ಷೇತ್ರದ ಜನತೆ ನಿರಂತರವಾಗಿ ಆಯ್ಕೆ ಮಾಡಬೇಕೆಂದು ಕೋರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿರಘು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ ಮಾತನಾಡಿದರು. ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ಗ್ರಾ.ಪಂ.ಮಾಜಿ ಸದಸ್ಯರಾದ ಎಂ.ಎಸ್.ಅನಂತು, ಹರಿರಾಜು, ಪಿಡಿಒ ಅಶ್ವಿನಿ, ಮುಖಂಡರಾದ ಮಂಚನಹಳ್ಳಿಧನು, ಹಲಗೇಗೌಡ, ಮಂಜುನಾಥ್, ಸಂಪತ್ತೇಗೌಡ, ಈರೇಗೌಡ, ಎಂ.ಬಿ.ಕುಮಾರಸ್ವಾಮಿ, ಮಹೇಶ್, ಕಾಳಪ್ಪ, ಬಸವರಾಜು, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular