Saturday, March 7, 2026
Google search engine

Homeಸ್ಥಳೀಯಕೈವಾರ ತಾತಯ್ಯ ದಿವ್ಯ ಸಂದೇಶಗಳು ಸಮಾಜಕ್ಕೆ ಆದರ್ಶ

ಕೈವಾರ ತಾತಯ್ಯ ದಿವ್ಯ ಸಂದೇಶಗಳು ಸಮಾಜಕ್ಕೆ ಆದರ್ಶ

ಚಾಮರಾಜನಗರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾಲಜ್ಞಾನಿ ಶ್ರೀ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ)ನವರ ಜನ್ಮದಿನ ಹಾಗೂ ತತ್ವಗಳ ಬಗ್ಗೆ ಕಾರ್ಯಕ್ರಮ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಶ್ರೀಮತಿ ಪದ್ಮ ಪುರುಷೋತ್ತಮ್ ರವರು ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡುತ್ತ ಕೈವಾರ ತಾತಯ್ಯನವರು ಪ್ರಭಾವಶಾಲಿ ಗುರುಗಳು. ತಮ್ಮ ದಿವ್ಯ ಜ್ಞಾನದಿಂದ ಮಾನವನ ಉದ್ಧಾರಕ್ಕೆ ಹಲವಾರು ಮಾರ್ಗದರ್ಶನವನ್ನು ನೀಡಿ ತತ್ವಗಳನ್ನು ಬೋಧಿಸಿದ್ದಾರೆ. ಪ್ರತಿ ಜನಾಂಗಕ್ಕೂ ಗುರುಗಳು ಇದ್ದು ಗುರುಗಳ ಮಾರ್ಗದರ್ಶನದಂತೆ ಬದುಕಿದಾಗ ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಸಲ್ಲಿಸಬಹುದು. ಕೈವಾರ ತಾತಯ್ಯನವರ ಲಕ್ಷಾಂತರ ಭಕ್ತರು ಇಂದಿಗೂ ಆಂಧ್ರ ಮತ್ತು ಕರ್ನಾಟಕದ ಪ್ರದೇಶಗಳಲ್ಲಿ ಇದ್ದಾರೆ ಎಂದರು.

ಹಿನ್ನಲೆ ಗಾಯಕ ರವಿಕುಮಾರ್ ಮಹದೇಶ್ವರರ ಗೀತೆಯನ್ನು ಹಾಡಿದರು.

ಪರಿಸರ ಪ್ರೇಮಿ ಸಿಎಂ ವೆಂಕಟೇಶ್ ರವರು ಕೈವಾರ ತಾತಯ್ಯನವರ ಜನ್ಮದಿನ ಹಾಗೂ ಅವರ ಕೊಡುಗೆಗಳ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮವನ್ನು ರೂಪಿಸಿರುವುದು ಹೆಮ್ಮೆಯಾಗಿದೆ. ಪ್ರತಿಯೊಬ್ಬ ಕವಿಗಳು, ಸಾಹಿತಿಗಳು ಗುರುಗಳ ಬಗ್ಗೆ ಮಾಹಿತಿಯನ್ನು ತಿಳಿದಾಗ ಜ್ಞಾನ ವೃದ್ಧಿಯಾಗುತ್ತದೆ. ಕೈವಾರ ತಾತಯ್ಯನವರ ಜೀವನ ಕುರಿತು ಡಾ. ರಾಜಕುಮಾರ್ ನಟಿಸಿರುವ ಚಲನಚಿತ್ರ ಅದ್ಭುತವಾಗಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭೂತ ,ವರ್ತಮಾನ ಭವಿಷ್ಯದ ಸಮಗ್ರ ಮಾಹಿತಿಯನ್ನು ತಮ್ಮ ದಿವ್ಯ ಜ್ಞಾನದ ಮೂಲಕ ಸಮಾಜಕ್ಕೆ ತಿಳಿಸಿ ,ಎಚ್ಚರಿಕೆಯನ್ನು ಕಾಲಜ್ಞಾನಿಗಳು ಮಾಡುತ್ತಾರೆ. ಸಾಮಾಜಿಕ ,ಧಾರ್ಮಿಕ, ರಾಜಕೀಯ ಹಾಗೂ ಮಾನವನ ಜೀವನ ತತ್ವಗಳ ಬಗ್ಗೆ ಕಾಲಜ್ಞಾನಿಗಳು ಹಾಗೂ ಗುರು ಪರಂಪರೆ ಅಪಾರವಾಗಿ ತಿಳುವಳಿಕೆಯನ್ನು ನೀಡಿದ್ದಾರೆ. ಕೈವಾರ ತಾತಯ್ಯನವರು ಪವಾಡ ಪುರುಷರು ಹಾಗೂ ಜ್ಞಾನ ಮತ್ತು ಭಕ್ತಿ ಮಾರ್ಗದ ಮೂಲಕ ಮಾನವನನ್ನು ಬದಲಾವಣೆಗೆ ತರುವ ಪ್ರಯತ್ನವನ್ನು ಮಾಡಿದರು. ಭವಿಷ್ಯದ ಸಮಾಜವನ್ನು ಕುರಿತು ಎಚ್ಚರಿಕೆಯ ತಿಳುವಳಿಕೆಯ ಮಾತುಗಳನ್ನು ಹೇಳಿದ್ದಾರೆ. ತಾತಯ್ಯ ರವರ ದಿವ್ಯ ಸಂದೇಶಗಳು ನಮ್ಮೆಲ್ಲರಿಗೂ ಆದರ್ಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಾಸ ಬಣಜಿಗ ಸಂಘದ ಸತೀಶ್, ರಂಗರಾಜು, ಸುಬ್ರಹ್ಮಣ್ಯ, ನಿವೃತ್ತ ಶಿಕ್ಷಕರಾದ ಗೀತಾ, ಸರಸ್ವತಿ, ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರ ಪ್ರಸಾದ್, ಶಿವಲಿಂಗಮೂರ್ತಿ, ಬಿ.ಕೆ ಆರಾಧ್ಯ, ಇದ್ದರು.

RELATED ARTICLES
- Advertisment -
Google search engine

Most Popular