Thursday, April 30, 2026
Google search engine

Homeರಾಜ್ಯಸುದ್ದಿಜಾಲಗೋಳೂರು ಹಾಡಿಯಲ್ಲಿ ಮನಕಲುಕುವ ದೃಶ್ಯ.....ಬದಿ ನೀರನ್ನೇ ಕುಡಿಯುತ್ತಿರುವ ಆದಿವಾಸಿಗಳು

ಗೋಳೂರು ಹಾಡಿಯಲ್ಲಿ ಮನಕಲುಕುವ ದೃಶ್ಯ…..ಬದಿ ನೀರನ್ನೇ ಕುಡಿಯುತ್ತಿರುವ ಆದಿವಾಸಿಗಳು

ವರದಿ: ಎಡತೊರೆ ಮಹೇಶ್

ಎಚ್.ಡಿ. ಕೋಟೆ: ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳೂರು ಹಾಡಿಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ.

ಆದಿವಾಸಿ ಜನರು ಒಂದು ತಿಂಗಳಿನಿಂದ ಭೂಮಿಯಲ್ಲಿ ಗುಂಡಿ ತೋಡಿ ಬರುವ ಬದಿ ನೀರನ್ನೇ ಕುಡಿಯುವ ದುಸ್ಥಿತಿ ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಬೋರ್ವೆಲ್ ಕೊರೆಯಲು ಮುಂದಾದರೂ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಗಮನ ಹರಿಸಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದು, ತಾಲೂಕು ಆಡಳಿತ ಮೌನ ವಹಿಸಿದೆ.

ಆರೋಗ್ಯ ಸಮಸ್ಯೆಗಳು ಉಲ್ಬಣವಾಗುವ ಭೀತಿ ಹೆಚ್ಚಿದೆ. ಆದಿವಾಸಿ ಮಹಿಳೆಯರು ತಾಲೂಕು ಆಡಳಿತ ಮತ್ತು ಶಾಸಕರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಶಾಪ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕು ಆಡಳಿತ ಆದಿವಾಸಿಗಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಾ? ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸುಸುತ್ತಾ? ಎಂಬುದನ್ನು ಕಾದು ನೋಡಬೇಕಾಗಿದೆ

RELATED ARTICLES
- Advertisment -
Google search engine

Most Popular