ಮೈಸೂರು: ನಾಡಹಬ್ಬದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಜಂಬೂ ಸವಾರಿಯಲ್ಲಿ ಭಾಗವಹಿಸಲು ನಾಡಿಗೆ ಆಗಮಿಸಿ ಅರಮನೆಆವರಣದಲ್ಲಿ ಬೀಡು ಬಿಟ್ಟಿರುವಕ್ಯಾಪ್ಟನ್‌ಅಭಿಮನ್ಯು ನೇತೃತ್ವದಗಜಪಡೆಗೆಪೌಷ್ಟಿಕ ಆಹಾರದ ಭೂರಿ ಭೋಜನ ನೀಡಲಾಗುತ್ತಿದೆ.
ಈ ಬಾರಿಯೂದಸರಾಉತ್ಸವಕ್ಕೆ ೧೪ ಆನೆಗಳನ್ನು ಕರೆತರಲಾಗುತ್ತಿದ್ದು, ಮೊದಲ ತಂಡದಲ್ಲಿ ೮(ಅರ್ಜುನಗೈರು) ಆನೆಗಳನ್ನು ಬರಮಾಡಿಕೊಳ್ಳಲಾಗಿದೆ. ಆನೆಗಳಿಗೆ ಯಾವುದೇಕೊರತೆಯಾಗದಂತೆಅರಣ್ಯ ಇಲಾಖೆ ನಿತ್ಯ ಪುಷ್ಕಳ ಆಹಾರ ನೀಡಲು ಸಿದ್ಧತೆ ಮಾಡಿದೆ. ಎಲ್ಲಾ ಆನೆಗಳಿಗೂ ಹೆಚ್ಚಿನದೈಹಿಕ ಸಾಮರ್ಥ್ಯಅವಶ್ಯಕತೆಇರುವುದರಿಂದಗಜಪಡೆಗೆ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.ಗಜಪಡೆಯನ್ನು ವಿಶೇಷ ಮುತುವರ್ಜಿ ವಹಿಸಿ ನೋಡಿಕೊಳ್ಳಲಾಗುತ್ತಿದ್ದು, ಹೆಚ್ಚು ಪೌಷ್ಟಿಕ ಆಹಾರ ನೀಡಿತಯಾರಿ ಮಾಡಲಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಪೌಷ್ಟಿಕ ಆಹಾರ ನೀಡಿಜಂಬೂಸವಾರಿಯನ್ನು ಯಶಸ್ವಿಗೊಳಿಸಲು ಬೇಕಾದ ಶಕ್ತಿ ತುಂಬಲಾಗುತ್ತಿದೆ. ಆನೆಗಳ ಸಾಮರ್ಥ್ಯ ವೃದ್ಧಿಗೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಮೊದಲ ತಂಡದಲ್ಲಿಕ್ಯಾಪ್ಟನ್‌ಅಭಿಮನ್ಯು ನೇತೃತ್ವದಲ್ಲಿ ೮ ಆನೆ(ಅರ್ಜುನಗೈರು) ಆಗಮಿಸಿದ್ದು, ಭೀಮ, ಅರ್ಜುನ, ಧನಂಜಯ, ಗೋಪಿ, ಕಂಜನ್, ವಿಜಯಾ, ವರಲಕ್ಷ್ಮೀ ಆನೆಗಳ ಅರಮನೆಗೆ ಆಗಮಿಸಿವೆ. ೨ನೇ ತಂಡದಲ್ಲಿ ಪ್ರಶಾಂತ, ಸುಗ್ರೀವ, ಹಿರಣ್ಯಾ, ಲಕ್ಷ್ಮೀ, ರೋಹಿತ್ ೫ ಆನೆ ಬರಲಿವೆ.
ಆನೆಗಳಿಗೆ ನೀಡುವಆಹಾರ: ಆನೆಗಳಿಗೆ ಪ್ರತಿನಿತ್ಯ ಮುಂಜಾನೆ ೫.೩೦ಕ್ಕೆ ಹಾಗೂ ಸಂಜೆ ೪ ಗಂಟೆಗೆ ಶಕ್ತಿ ವೃದ್ಧಿಸುವ, ಮೈಕಟ್ಟು ಅರಳಿಸುವ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲ ಅಕ್ಕಿ, ಈರುಳ್ಳಿ ಬೇಯಿಸಿ ಮಿಶ್ರಣ ಮಾಡಿ, ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಜತಗೆಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ. ಆನೆಗಳಿಗೆ ವಿಶೇಷ ಆಹಾರತಯಾರಿಸುವುದಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.
ಪ್ರತಿ ದಿನ ಅರಮನೆಯಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರದೇವಾಲಯದ ಬಳಿ ಇರುವಅಡುಗೆ ಮನೆಯಲ್ಲಿ ಆನೆಗಳಿಗೆ ವಿಶೇಷ ಆಹಾರತಯಾರಿಸಲಾಗುತ್ತಿದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಧಿ ಬೇಯಿಸಲಾಗುತ್ತದೆ. ಬಳಿಕ ಆ ಪಾತ್ರೆಗೆ ಹಸಿರು ಕಾಳು, ಕುಸುಬಲ ಅಕ್ಕಿ ಹಾಗೂ ಈರುಳ್ಳಿಯನ್ನು ಬೆರೆಸಿ ಬೇಯಿಸಲಾಗುತ್ತದೆ. ಬೇಯಿಸಿದ ಧಾನ್ಯಗಳನ್ನು ಟ್ರೇಗೆ ಹಾಕಿ ಮುದ್ದೆಯಾಗಿಕಟ್ಟಿ ಸಂಜೆ ಆನೆಗಳು ತಾಲೀಮಿಗೆ ಹೋಗುವ ಮುನ್ನ ನೀಡಲಾಗುತ್ತದೆ.
ಸಂಜೆತಾಲೀಮು ಮುಗಿಸಿ ಬಂದ ನಂತರರಾತ್ರಿ ೭ಕ್ಕೆ ಮತ್ತೊಮ್ಮೆಆಹಾರ ಪದಾರ್ಥಗಳನ್ನು ಬೇಯಿಸಲಾಗುತ್ತದೆ. ರಾತ್ರಿ ೯ರ ನಂತರ ಬೇಯಿಸಿದ ಆಹಾರ ಪದಾರ್ಥವನ್ನುದಾಸ್ತಾನುಕೊಠಡಿಯಲ್ಲಿಟ್ಟು ಬೀಗ ಹಾಕಿ ಸುರಕ್ಷಿತವಾಗಿಡಲಾಗುತ್ತದೆ. ಆ ಆಹಾರವನ್ನು ಮುಂಜಾನೆ ೫ಕ್ಕೆ ಪಾತ್ರೆಯಿಂದತೆಗೆದು ಮುದ್ದೆಕಟ್ಟಿ ೫.೩೦ರಿಂದ ೬.೩೦ರ ಒಳಗೆ ಎಲ್ಲಾ ಆನೆಗಳಿಗೂ ನೀಡಲಾಗುತ್ತದೆ. ಬಳಿಕ ತಾಲೀಮಿಗೆ ಆನೆಗಳನ್ನು ಕರೆದೊಯ್ಯಲಾಗುತ್ತದೆ. ಪ್ರತಿದಿನ ಒಂದೊಂದು ಆನೆಗೆ ಮೂರುಕೆಜಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ನಂತರ ದಿನದಿಂದ ಅವುಗಳ ಪ್ರಮಾಣ ಹೆಚ್ಚಿಸಲಾಗುತ್ತದೆ.
ಮಧ್ಯಾಹ್ನದ ವೇಳೆ ಆನೆಗಳಿಗೆ ಕುಸುರೆ ನೀಡಲಾಗುತ್ತಿದೆ. ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿಇಂಡಿ, ಉಪ್ಪನ್ನು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿಗಂಟುಕಟ್ಟಿ(ಕುಸುರೆ) ಆನೆಗಳಿಗೆ ನೀಡಲಾಗುತ್ತಿದೆ. ಆನೆಗಳು ಪ್ರತಿ ದಿನ ಮೂರು ಬಾರಿ ದಿನವೊಂದಕ್ಕೆಒಟ್ಟು ೨೫೦ರಿಂದ ೩೦೦ ಲೀಟರ್ ನೀರುಕುಡಿಯುತ್ತವೆ. ಮುಂಜಾನೆ ೫.೩೦ಕ್ಕೆ ಪೌಷ್ಟಿಕ ಆಹಾರ ಸೇವಿಸಿದ ನಂತರಒಮ್ಮೆ, ಮಧ್ಯಾಹ್ನ ಹಾಗೂ ಸಂಜೆತಾಲೀಮಿಗೆ ಹೋಗುವ ಮುನ್ನ ನೀರುಕುಡಿಸಲಾಗುತ್ತದೆ.
ಆನೆಗಳಿಗೆ ನೀಡುವಆಹಾರ: ನೆಗಳಿಗೆ ಹೊಟ್ಟೆತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುತ್ತದೆ. ಬೆಳಗ್ಗೆ ೬.೩೦ ಮತ್ತುರಾತ್ರಿ ೭ಕ್ಕೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದಆಹಾರ ನೀಡಲಾಗುತ್ತದೆ. ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದಒಣಹುಲ್ಲಿನಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ. ಆನೆಗಳ ತೂಕಕ್ಕೆಅನುಗುಣವಾಗಿ ಪೌಷ್ಟಿಕ ಆಹಾರ ನೀಡಲಾಗುತ್ತದೆ.
ತೂಕ ಪರೀಕ್ಷೆಯಿಂದಯಾವ ಆನೆಗಳಿಗೆ ಎಷ್ಟು ಆಹಾರ ನೀಡಬೇಕುಎಂಬುದನ್ನು ಸೂಚಿಸಿದ್ದು, ತೂಕಕ್ಕೆಅನುಗುಣವಾಗಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಎಲ್ಲಾ ಆನೆಗಳಿಗೂ ಪೌಷ್ಠಿಕಾಂಶಯುಕ್ತಆಹಾರ ನೀಡಲಿದ್ದು, ಅಂಬಾರಿ ಹೊರುವಅಭಿಮನ್ಯುವಿಗೆ ಬೇರೆ ಆನೆಗಳಿಂತ ಹೆಚ್ಚು ಆಹಾರ ನೀಡಲಾಗುತ್ತದೆ. -ಸೌರಭ್‌ಕುಮಾರ್, ಡಿಸಿಎಫ್