ರಾಮನಗರ: ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ ನಿಧನರಾದ ನಟ ನಿರ್ದೇಶಕ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ಇಂದು ನೆರವೇರಿತು.
ರಾಮನಗರ ಜಿಲ್ಲೆ ಗುನ್ನೂರು ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ಲಿಂಗಾಯತ ಸಂಪ್ರದಾಯದಂತೆ ನಟ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ನೆರವೇರಿತು. ದಿಲೀಪ್ ರಾಜ್ ಅಣ್ಣನ ಮಗ ಆರ್ಯನ್ ಅಂತಿಮ ವಿಧಿವಿಧಾನ ನೆರವೇರಿಸಿದರು.
ರಾಜಶೇಖರ ಶಿವಾಚಾರ್ಯ ನೇತೃತ್ವದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಹಲವು ನಟರು, ನಟಿಯರು ಭಾಗಿಯಾಗಿ ಕಣ್ಣೀರಿನ ವಿದಾಯ ಸಲ್ಲಿಸಿದರು.



