ಬೆಂಗಳೂರು : ಚಿನ್ನ ಖರೀದಿಸಬೇಡಿ, ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಮಿತಿಗೊಳಿಸಿ, ವಿದೇಶ ಪ್ರವಾಸ ಕಡಿಮೆ ಮಾಡಿ, ವರ್ಕ್ ಫ್ರಂ ಹೋಮ್ ರೂಢಿಸಿಕೊಳ್ಳಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ನಟ ಕಿಶೋರ್ ಕುಮಾರ್ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕಿಶೋರ್, ಮುಂದಿನ ಪ್ರಕಟಣೆಯಲ್ಲಿ ಈ ‘ನಾನ್-ಬಯಲಾಜಿಕಲ್’ ಸರ್ಕಾರ ಹಸ್ದೇವ್‌ನಿಂದ ನಿಕೋಬಾರ್‌ವರೆಗೆ ಕಾಡುಗಳನ್ನು ಮಿಸ್ಟರ್ ‘ಎ’ಗೆ ಮಾರಾಟ ಮಾಡುವಲ್ಲಿ ನಿರತವಾಗಿದೆ. ಭಾರತವನ್ನು ವಿಶ್ವದ ಅತ್ಯಂತ ಕಲುಷಿತ ರಾಷ್ಟ್ರವನ್ನಾಗಿ ಮಾಡಿ, ಮಾಲಿನ್ಯ ನಿಯಂತ್ರಣದಲ್ಲಿ ವಿಫಲವಾಗಿರುವ ಕಾರಣ ಜನರು 25 ಶೇಕಡಾ ಉಸಿರಾಟವನ್ನೂ ಕಡಿಮೆ ಮಾಡಿ ದೇಶಭಕ್ತಿ ತೋರಿಸಬೇಕು ಎಂದು ಹೇಳಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಿಶೋರ್ ಹಂಚಿಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.



