Thursday, May 14, 2026
Google search engine

Homeಸಿನಿಮಾಪ್ರಿನ್ಸೆಸ್ ಅವತಾರದಲ್ಲಿ ಆಲಿಯಾ ಭಟ್‌ : ಕೇನ್ಸ್ ಅಂಗಳದಲ್ಲಿ ಗ್ಲಾಮರ್ ಸುನಾಮಿ!

ಪ್ರಿನ್ಸೆಸ್ ಅವತಾರದಲ್ಲಿ ಆಲಿಯಾ ಭಟ್‌ : ಕೇನ್ಸ್ ಅಂಗಳದಲ್ಲಿ ಗ್ಲಾಮರ್ ಸುನಾಮಿ!

ಮುಂಬೈ : 79ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಅದ್ಭುತ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಕೇವಲ ನಟಿಯಾಗಿ ಮಾತ್ರವಲ್ಲದೆ, ರಾಜಕುಮಾರಿಯಂತೆ ಕಂಗೊಳಿಸುವ ಮೂಲಕ ನೆರೆದಿದ್ದವರ ಮನಗೆದ್ದಿದ್ದಾರೆ.‌

ಆಲಿಯಾ ಈ ಬಾರಿ ತಿಳಿ ನೀಲಿ ಬಣ್ಣದ (Light Blue) ಹಾಫ್-ಶೋಲ್ಡರ್ ಗೌನ್ ಧರಿಸಿದ್ದರು. ಈ ಗೌನ್ ಅವರಿಗೆ ಅತ್ಯಂತ ರಾಯಲ್ ಮತ್ತು ಎಲಿಗೆಂಟ್ ಲುಕ್ ನೀಡಿತ್ತು.

ಸಾಫ್ಟ್ ಗ್ಲಾಮ್ ಮೇಕಪ್ ಹಾಗೂ ಸರಳವಾದ ಸ್ಟೈಲಿಂಗ್ ಮೂಲಕ ಅವರು ತಮ್ಮ ನೈಸರ್ಗಿಕ ಸೌಂದರ್ಯವನ್ನು ಎತ್ತಿ ತೋರಿಸಿದ್ದಾರೆ. ಇದು ಆಲಿಯಾ ಭಟ್ ಅವರ ಎರಡನೇ ಕಾನ್ಸ್ ಪಯಣವಾಗಿದ್ದು, ಮೊದಲ ಬಾರಿಯಂತೆ ಈ ಬಾರಿಯೂ ಅವರು ಫ್ಯಾಷನ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಲಿಯಾ ಅವರ ಈ ‘ಪ್ರಿನ್ಸೆಸ್ ಅವತಾರ’ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಅವರ ಈ ರಾಯಲ್ ಲುಕ್‌ಗೆ ಫಿದಾ ಆಗಿದ್ದು, “ನಿಜವಾದ ರಾಜಕುಮಾರಿ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

“ತಮ್ಮ ಎಲಿಗೆಂಟ್ ಸ್ಟೈಲ್ ಮತ್ತು ಅದ್ಭುತ ವ್ಯಕ್ತಿತ್ವದ ಮೂಲಕ ಆಲಿಯಾ ಭಟ್ ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿಯನ್ನು ಬೆಳಗಿಸಿದ್ದಾರೆ.” (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular