Friday, May 8, 2026
Google search engine

Homeರಾಜ್ಯಸುದ್ದಿಜಾಲಬಸವೇಶ್ವರರ ತತ್ವಗಳು ಜಗತ್ತಿಗೆ ಮಾದರಿ: ನಟರಾಜ ಸ್ವಾಮೀಜಿ ಅಭಿಮತ

ಬಸವೇಶ್ವರರ ತತ್ವಗಳು ಜಗತ್ತಿಗೆ ಮಾದರಿ: ನಟರಾಜ ಸ್ವಾಮೀಜಿ ಅಭಿಮತ

ಕೆ.ಆರ್.ನಗರ : 12 ನೇ ಶತಮಾನದಲ್ಲಿಯೇ ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡಿದ ಜಗಜ್ಯೋತಿ ಬಸವೇಶ್ವರರ ಬದುಕು ಮತ್ತು ಜನಪರ ಚಿಂತನೆಗಳು ಜಗತ್ತಿಗೆ‌ ಮಾದರಿ ಎಂದು ಗಾವಡಗೆರೆ ಗುರು ಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿಗಳು ಹೇಳಿದರು.

ಪಟ್ಟಣದ ಸಾರಿಗೆ ಸಂಸ್ಥೆ ಬಸ್ ಘಟಕದ ಆವರಣದಲ್ಲಿ ಶುಕ್ರವಾರ ಕೆಎಸ್ ಆರ್ ಟಿಸಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿ ಮಾತನಾಡಿದ ಅವರು ದೈವಾಂತ ಶಂಭೂತರಾಗಿದ್ದ ಅಣ್ಣ ಬಸವಣ್ಣನವರ ವಚನ ಸಾರವನ್ನು ಅರಿತು ಬದುಕು ನಡೆಸಿದರೆ ಸಂತಸದಿಂದ ಜೀವನ ನಡೆಸಬಹುದು ಎಂದರು.

ಪ್ರತಿಯೊಬ್ಬ ಮನುಷ್ಯನು ಸಂತಸ ಮತ್ತು ಸಹಬಾಳ್ವೆಯಿಂದ ಬದುಕಬೇಕೆಂಬ ಕನಸನ್ನು ಕಂಡಿದ್ದ ಕಾಯಕಯೋಗಿ ಅದನ್ನು ಸಹಕಾರಗೊಳಿಸಲು ತಮ್ಮ‌ ಜೀವನದುದ್ದಕ್ಕೂ ಕಂಕಣ ಬದ್ದರಾಗಿ ಕೆಲಸ ಮಾಡಿದ್ದರು ಎಂದು ನುಡಿದರು.

ಸರ್ವಕಾಲಕ್ಕೂ ಸಲ್ಲುವ ಬಸವೇಶ್ವರರ ಯೋಚನೆ, ಚಿಂತನೆ ಮತ್ತು ಮಾನವ ಪರ ಕಾಳಜಿ ಅನುಕರಣೀಯವಾಗಿದ್ದು ಅಂತಹ ಯುಗ ಪುರುಷ ಕನ್ನಡ ನಾಡಿನಲ್ಲಿ ಜನಿಸಿ ತಮ್ಮ ವಿಚಾರಧಾರೆಗಳ ಮೂಲಕ ನಾಡಿನ ಗೌರವ ಮತ್ತು ಘನತೆಯನ್ನು‌ ಮುಗಿಲೆತ್ತರಕ್ಕೆ ಏರಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಗ್ರಾಮಾಂತರ ವಿಭಾಗೀಯ ತಾಂತ್ರಿಕ ಅಭಿಯಂತರ ಪಿ.ಮಹೇಶ್ ಮಾತನಾಡಿ, ಸಮಾಜದ ಉದ್ದಾರಕ್ಕಾಗಿ ದುಡಿದ ಮಹಾನುಭಾವರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಅವರುಗಳ ತತ್ವ ಆರ್ದಶ ಹಾಗೂ ಸಮಾಜ ಮುಖಿ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಭದ್ರತಾ ಜಾಗೃತಾಧಿಕಾರಿ ಎಂ.ಪಿ.ರಘು, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ರಶ್ಮಿ, ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಹೆಚ್.ರಾಜೇಶ್ ಮಡಹಳ್ಳಿ ಮಾತನಾಡಿದರು. ಕೆ.ಆರ್.ನಗರ ಬಸ್ ಘಟಕದ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಬಸ್ ಘಟಕದ ಸಿಬ್ಬಂದಿ ವರ್ಗ ಹಾಜರಿದ್ದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸಮನ್ವಯತೆ ಕಾಪಾಡುವಂತೆ ಎಚ್ಚರಿಕೆ

ಪಟ್ಟಣದ ಬಸ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ವ್ಯವಸ್ಥಾಪಕರ ನಡುವೆ ಸಮನ್ವಯತೆ ಇಲ್ಲದ ಪರಿಣಾಮ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ತೊಂದರೆಯಾಗುತ್ತಿದ್ದು ಇದನ್ನು ಸರಿಪಡಿಸಿಕೊಂಡು ಕೆಲಸ ಮಾಡದಿದ್ದರೆ ಎಲ್ಲರನ್ನು ಸಾಮೂಹಿಕವಾಗಿ ವರ್ಗವಣೆ ಮಾಡಲಾಗುತ್ತದೆ ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ಸಂಚಲನಾಧಿಕಾರಿ ದಿನೇಶ್ ಕುಮಾರ್ ಎಚ್ಚರಿಕೆ ನೀಡಿದರು.

ಘಟಕದ ಆವರಣದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಚಾರದ ಬಗ್ಗೆ ನಮಗೆ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿದ್ದು ಇದನ್ನು ನಾವು ಸಹಿಸಲು ಸಾಧ್ಯವಿಲ್ಲವೆಂದು ಕಠಿಣ ಎಚ್ಚರಿಕೆ ನೀಡಿದ ಅವರು ಒಂದೆಡೆ ಕೆಲಸ‌ ಮಾಡುವವರು ವೈಮನಸ್ಸಿಲ್ಲದೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸುವ ನಾವುಗಳು ನೀತಿ ನಿಯಮಗಳಿಗೆ ತಲೆ ಬಾಗಿ ಅದರನುಸಾರ ನಡೆದುಕೊಳ್ಳಬೇಕಾಗುತ್ತದೆ ಅದನ್ನು ಹೊರತು ಪಡಿಸಿ ದುರ್ವತನೆ ತೋರಿ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ನಡೆದು ಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಎಂದು ಕಿವಿ ಮಾತು ಹೇಳಿದರು.

RELATED ARTICLES
- Advertisment -
Google search engine

Most Popular