Friday, May 8, 2026
Google search engine

Homeಅಪರಾಧಕಾನೂನುಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳ ಸಂರಕ್ಷಣೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳ ಸಂರಕ್ಷಣೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

  • ಐಐಟಿ ರೂರ್ಕಿ ಸಮಿತಿ ವರದಿ ಕುರಿತ ಚರ್ಚೆ, ಜು.30ಕ್ಕೆ ಮುಂದಿನ ವಿಚಾರಣೆ ನಿಗದಿ

ಮೈಸೂರು: ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ.

ಮೇ 4ರಂದು ಐಐಟಿ ರೂರ್ಕಿ ಸಮಿತಿ ವರದಿಯನ್ನು ನ್ಯಾಯಮೂರ್ತಿಗಳಾದ ಪರಿಶೀಲಿಸಿದ ಪಾರ್ದಿವಾಲಾ ಮತ್ತು ವಿಜಯ್ ಬಿಷ್ಟೋಯ್ ಅವರನ್ನು ಒಳಗೊಂಡ ಪೀಠವು, ಈ ಎರಡೂ ನಿರ್ಮಾಣಗಳನ್ನು ಸಂರಕ್ಷಿಸಬೇಕು ಮತ್ತು ಅಗತ್ಯ ನವೀಕರಣದೊಂದಿಗೆ ಪುನಃಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಬೇಕೆಂದು ಪೀಠ ಹೇಳಿದೆ. ಈ ಎರಡು ನಿರ್ಮಾಣಗಳನ್ನು ನೆಲಸಮಗೊಳಿಸಬೇಕೆಂಬ ಪ್ರಸ್ತಾವನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸ್ಪೆಷಲ್ ಲೀವ್ ಪಿಟಿಷನ್ ಸಂಬಂಧ ನ್ಯಾಯಾಲಯವು ವಿಚಾರಣೆ ನಡೆಸಿ, ಐಐಟಿ ರೂರ್ಕಿ ಸಮಿತಿಯ ಸಂಶೋಧನೆಗಳಿಗೆ ಅನುಗುಣವಾಗಿ ಮುಂದುವರಿಯುವಂತೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಮೈಸೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ. ಈ ಪಾರಂಪರಿಕ ನಿರ್ಮಾಣಗಳಿಗೆ ಯಾವುದೇ ಹಾನಿಯಾಗದಂತೆ ಸೂಕ್ತ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ ಸೂಚಿಸಿರುವ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಜು.30ಕ್ಕೆ ನಿಗದಿಪಡಿಸಿದೆ. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಬರಲ್ ಹೆರಿಟೇಜ್ ಶಿಫಾರಸುಗಳನ್ನು ಪರಿಗಣಿಸುವಂತೆಯೂ ಪೀಠವು ಅಧಿಕಾರಿಗಳಿಗೆ ಸೂಚಿಸಿದೆ.

ಐಐಟಿ ರೂರ್ಕಿ ವರದಿ: ಅಕ್ಟೋಬರ್ 2025 ರಲ್ಲಿ ನಡೆಸಿದ ಕಟ್ಟಡಗಳ ಸಮಗ್ರ ವಿಶ್ಲೇಷಣೆ ಮತ್ತು ಆಡಿಟ್ ಆಧಾರದಲ್ಲಿ ಐಐಟಿ ರೂರ್ಕಿ ತಜ್ಞರು, ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಬಿಲ್ಡಿಂಗ್ ಎರಡನ್ನೂ ಸಂರಕ್ಷಿಸುವುದು ಸಾಧ್ಯವೆಂದು ಹೇಳಿದ್ದಾರೆ. ಮೈಸೂರಿನ ನಾಗರಿಕ ವಾಸ್ತುಶಿಲ್ಪ ಸಮೂಹದ ಭಾಗವಾಗಿ ಈ ಕಟ್ಟಡಗಳು ಇಂದಿಗೂ ಪ್ರಸ್ತುತವಾಗಿದ್ದು, ಪರಸ್ಪರ ಸಂಬಂಧ ಹೊಂದಿರುವ ಮೌಲ್ಯಗಳ ಒಳಗೆ ವೈಜ್ಞಾನಿಕ ಸಂರಕ್ಷಣಾ ಯೋಜನೆ ಅಗತ್ಯವಿದ್ದು, ತೀವ್ರ ಹಾನಿಗೀಡಾಗಿರುವ ಭಾಗಗಳನ್ನು ಒಳಗೊಂಡಿವೆ. ಸಮಗ್ರ ಮತ್ತು ಪುನರುಜ್ಜಿ ವನದ ಭಾಗವಾಗಿ ಮರುನಿರ್ಮಾಣ ಮಾಡಬಹುದು ಎಂದು ಸಮಿತಿ ಹೇಳಿದೆ.

ನೆಲಸಮ ಪ್ರಸ್ತಾವನೆ ವಿರುದ್ಧ ಪಿಟಿಷನ್: ಪಾರಂಪರಿಕ ಪ್ರತಿಪಾದಕ ಹಾಗೂ ಲೇಖಕ ಜಿ.ಸತ್ಯನಾರಾಯಣ, ಮಹಾರಾಜ ಜಯಚಾಮರಾಜ ಒಡೆಯರ್ ಅವರ ಅಳಿಯ ಆ‌ರ್.ರಾಜಚಂದ್ರ ಮತ್ತು ಇತರರು ಈ ಎಸ್‌ಎಲ್‌ಪಿ ಸಲ್ಲಿಸಿದ್ದರು. ಈ ಎಸ್‌ಎಲ್‌ಪಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಹಿಂದೆ ನೆಲಸಮ ಮತ್ತು ಪುನರ್ ನಿರ್ಮಾಣ ಕ್ರಮಕ್ಕೆ ತಡೆ ನೀಡಿತ್ತು. ಈ ನಡುವೆ ಇತ್ತೀಚೆಗೆ ಲ್ಯಾನ್ಸ್ ಡೌನ್ ಕಟ್ಟಡದ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ, 35.95 ಕೋಟಿ ರೂ. ಮೊತ್ತಕ್ಕೆ ಟೆಂಡರ್ ಕರೆದಿದೆ. ಸುಪ್ರೀಂಕೋರ್ಟ್ ಅಭಿಪ್ರಾಯಗಳನ್ನು ಸ್ವಾಗತಿಸಿದ ಆ‌ರ್.ರಾಜಚಂದ್ರ, ಅಧಿಕಾರಿಗಳು ಈಗ ವಾಸ್ತವ ಗಳನ್ನು ಗುರುತಿಸಿ ನಗರದ ಪರಂಪರೆಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸಿದ್ದಾರೆ.

ನ್ಯಾಯಾಲಯ ಸದ್ಯ ಯಥಾಸ್ಥಿತಿಯಲ್ಲಿ ಲ್ಯಾನ್ಸ್‌ಡೌನ್‌ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸುವಂತೆ ಹೇಳಿದ್ದು, ಈ ಸಂಬಂಧ ನಮ್ಮ ಇಂಟ್ಯಾಕ್ ಮೈಸೂರು, ಇಂಟ್ಯಾಕ್ ಬೆಂಗಳೂರು, ಇಂಟ್ಯಾಕ್ ದೆಹಲಿ, ವರದಿ ಆಧಾರದ ಮೇಲೆ ಈ ತೀರ್ಮಾನ ಮಾಡಿದೆ. ಜು.೩೦ರಷ್ಟು ವಿಚಾರಣೆ ಮುಂದೂಡಿದ್ದು ಅಲ್ಲಿ ಎನೆಲ್ಲಾ ತೀರ್ಮಾನ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರೊ.ರಂಗರಾಜನ್‌, ಇತಿಹಾಸ ತಜ್ಞ

RELATED ARTICLES
- Advertisment -
Google search engine

Most Popular