ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ, ಕ್ರೆಡಾಯ್ ಮೈಸೂರು, ಬಿಲ್ಡರ್ಸ್ಚಾರಿಟಬಲ್ ಫೌಂಡೇಷನ್ ಸಹಯೋಗದಲ್ಲಿ ಮೈಸೂರಿನ ಸ್ಕೌಟ್‌್ಸ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಶುಕ್ರವಾರ ನಾಲ್ಕು ದಿನಗಳ ಮೈರಿಯಾಲ್ಟಿ-2026 ರಿಯಲ್ ಎಸ್ಟೇಟ್ ಎಕ್ಸ್ಪೋಗೆಗೆ ಚಾಲನೆ ದೊರೆಯಿತು.
ಮೈ ಬಿಲ್ಡ್ ವ್ಯವಸ್ಥಾಪನಾ ಮಂಡಳಿ ಸದಸ್ಯ ಉದ್ಯಮಿ ಕೆ.ಶ್ರೀರಾಮ್ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುವ ಸಂದರ್ಭದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳು ಮುಂದಿನ ಆರು ತಿಂಗಳ ಕಾಲ ಶಾಂತವಾಗಿರಬೇಕು. ನಂತರ ಸುವರ್ಣ ಅವಧಿ ಶುರುವಾಗುತ್ತದೆ. “ಪ್ರಧಾನಿ ನರೇಂದ್ರ ಮೋದಿ ನೀಡಿರುವ ಮಿತ ವ್ಯಯ ಮತ್ತು ಎಚ್ಚರಿಕೆಯ ಕರೆ ಅನಗತ್ಯ ಭೀತಿ ಸೃಷ್ಟಿಸಿದೆ ಎಂಬ ಟೀಕೆಗಳ ನಡುವೆಯೂ, ದೇಶದ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಇಂತಹ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದವರು ಯಾವುದೇ ಹೊಸ ಪ್ರಯೋಗಗಳಿಗೆ ಕೈ ಹಾಕದೇ ತಟಸ್ಥವಾಗಿ ಮುಂದುವರಿಯಬೇಕು,” ಎಂದು ಮಾರ್ಗದರ್ಶನ ಮಾಡಿದರು.
“ದೇಶದ ಸಾರಿಗೆ ಮತ್ತು ಲಾಜಿಸ್ಟಿಕ್‌್ಸ ವೆಚ್ಚವು ಜಿಡಿಪಿಯ ಶೇ. 15 ರಿಂದ 8 ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿಕಸಿತ ರಾಷ್ಟ್ರಗಳಲ್ಲಿ ಈ ವೆಚ್ಚ ಶೇ. 5 ಶೇಕಡಕ್ಕಿಂತ ಕಡಿಮೆ ಇರುತ್ತದೆ. ಭಾರತವು ಈ ದಿಕ್ಕಿನಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ,” ಎಂದು ತಿಳಿಸಿದರು. “ಈ ವರ್ಷ ಮಳೆಯ ಅಸ್ಥಿರತೆ ಎದುರಾಗುವ ಸಾಧ್ಯತೆ ಇದ್ದು, ಕೃಷಿ ಆಧರಿತ ಭಾರತದ ಆರ್ಥಿಕತೆಗೆ ಇದು ದೊಡ್ಡ ಸವಾಲಾಗಬಹುದು. ಅಲ್ಲದೆ ಗಲ್‌್ಫ ರಾಷ್ಟ್ರಗಳ ಆರ್ಥಿಕ ಸಮಸ್ಯೆಗಳ ಪರಿಣಾಮವಾಗಿ ವಿದೇಶದಲ್ಲಿರುವ ಭಾರತೀಯರಿಂದ ಬರುತ್ತಿದ್ದ ಹಣ ವರ್ಗಾವಣೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈ ರಿಯಾಲ್ಟಿ-2026ರ ಚೇರ್ಮನ್ ಅಶ್ವಿನ್ ಆರ್. ಪಾಳೇಗಾರ್, ಗೌರವ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್, ಬಿಎಐ ಚೇರ್‌ಮನ್ ಕೆ.ಆರ್. ಪ್ರಭಾಕರ್‌ರಾವ್, ಗೌರವ ಕಾರ್ಯದರ್ಶಿ ಎಂ.ಡಿ. ಪ್ರವೀಣ್‌ಪಾಲ್ , ಕ್ರೆಡಾಯ್ ಮೈಸೂರು ಚಾಪ್ಟರ್ ಅಧ್ಯಕ್ಷ ಹರೀಶ್ ಶೆಣೈ, ಗೌರವ ಕಾರ್ಯದರ್ಶಿ ನಾಗರಾಜ್ ವಿ. ಭೈರಿ, ಉದ್ಯಮಿಗಳಾದ ಶ್ರೀಹರಿ ಹಾಗೂ ಇತರರು ಇದ್ದರು.



