ಹುಣಸೂರು : ಕಣ್ಣುಗಳು ಮನುಷ್ಯನ ಮುಖ್ಯ ಅಂಗವಾಗಿದ್ದು, ಕಣ್ಣಿಗೂ ಹೆಚ್ಚು ಆದ್ಯತೆ ನೀಡಿದರೆ ಮಾತ್ರ ಅಂದತ್ವ ನಿವಾರಣೆ ಸಾಧ್ಯವೆಂದು ನಗರದ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಶಿವಮಾದಯ್ಯ ತಿಳಿಸಿದರು.
ನಗರದ ರೋಟರಿ ಭವನದಲ್ಲಿ, ರೋಟರಿ ಕ್ಲಬ್, ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ನೀವು ಸಮಾಜದ ಅಂಕು,ಡೊಂಕುಗಳನ್ನು ತಿದ್ದಿ ,ತೀಡಿ ಹೋಗಲಾಡಿಸ ಬೇಕಾದರೆ. ಕಣ್ಣುಗಳ ಆರೋಗ್ಯ ಬಹಳ ಮುಖ್ಯವಾಗಿದೆ ಎಂದರು.
ಉಚಿತ ಕಣ್ಣಿನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ತಹಶಿಲ್ದಾರ್ ಜೆ. ಮಂಜುನಾಥ್ ಮಾತನಾಡಿ, ಮನುಷ್ಷನ ನಯನಗಳು ಅತೀ ಸೂಕ್ಷ್ಮತೆಯಿಂದ ಕೂಡಿದ್ದು, ನಾಗರಿಕ ಬಂಧುಗಳು ಕಣ್ಣುಗಳ ವಿಷಯದಲ್ಲಿ ಜಾಗೃತಿವಹಿಸಬೇಕಿದೆ. ನಿಮ್ಮ ಕಣ್ಣುಗಳ ಆರೋಗ್ಯಕ್ಕೆ, ಹಾರೈಕೆಗೆ ಕಟ್ಟುಬದ್ದವಾಗಿ ನಿಂತಿರುವ ರೋಟರಿ ಕ್ಲಬ್ಬಿನ ಕಾರ್ಯವನ್ನು ಶ್ಲಾಘಿಸಿದರು.
ನನ್ನ ವಿದ್ಯಾಭ್ಯಾಸದ ದಿನಗಳಿಂದಲೂ ರೋಟರಿ ಸಂಸ್ಥೆಯು ಹಲವು ವಿಭಾಗಗಳಲ್ಲಿ ಧ್ಯೇಯವನ್ನು ಇಟ್ಟುಕೊಂಡು ಸಮಾಜದ ಒಳಿತಿಗಾಗಿ, ಆರೋಗ್ಯ,ಅಕ್ಷರ, ಪರಿಸರ, ಶುದ್ದ ಕುಡಿಯುವ ನೀರು ಹಾಗೂ ಬಡತನದ ಹಸಿವು ನೀಗಿಸಲು ಪ್ರತಿ ತಾಲೂಕಿನಲ್ಲಿ ಸರಕಾರದ ಅಂಗವಾಗಿ ವಿಶ್ವಮಟ್ಟದಲ್ಲಿ ಸ್ನೇಹ ಸೇತುವೆಯಾಗಿ ಕೆಲಸ ಮಾಡುತ್ತಿರುವ ರೋಟರಿ ಕ್ಲಬ್ ಮಾದರಿ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಪೋಲಿಯೊ ನಿರ್ಮೂಲನೆ, ಇತ್ತೀಚಿನ ಮಾರಕ ರೋಗ ಕ್ಯಾನ್ಸರ್ ಸೇರಿದಂತೆ. ಆರೋಗ್ಯ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ರೋಟರಿ ಕ್ಲಬ್ ಮಾನವ ಧರ್ಮದ ಹಾದಿಯಲ್ಲಿದೆ ಇದೆ ಎಂದರು.
ಸಮೃದ್ಧಿ ಮಂಜುನಾಥ್ ಕಣ್ಣಿನ ಶಸ್ತ್ರ ಶಿಬಿರಾರ್ಥಿಗಳಿಗೆ ಹೇಗಿರಬೇಕು ಎಂಬ ಮಾಹಿತಿ ನೀಡಿದರು. ಟೋಟಲ್ OPD =52
ಶಸ್ತ್ರ ಚಿಕಿತ್ಸೆ 23 ಆಯ್ಕೆಯಾಗಿದ್ದು,
unfit =13
ಕನ್ನಡಕ 23 ಶಿಬಿರಾರ್ಥಿಗಳು ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಮುಖ್ಯಸ್ಥೆ ರಾಜೇಶ್ವರಿ, ಹಿರಿಯ ರೊ. ಆರ್.ಆನಂದ್, ರೊ.ರಾಜಶೇಖರ್, ರೊ.ಲೂಯಿಸ್ ಪೆರೇರಾ, ರೊ.ಚಿಲ್ಕುಂದ ಮಹೇಶ್, ಹಾಗೂ ಶ್ರೀ ಕಂಠ ಮೂರ್ತಿ, ಉಷಾ ಜಿ ಎಸ್, ಮೋಹನ್ ಕುಮಾರ್, ಫಾರಿದ ಬಾನು, ಸಂಗೀತ,ತೇಜ, ಇದ್ದರು.



