Monday, June 22, 2026
Google search engine

Homeರಾಜಕೀಯಬಿಜೆಪಿ ಸತ್ಯ ಹೇಳುತ್ತದೆಯಾ : ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಟಾಂಗ್

ಬಿಜೆಪಿ ಸತ್ಯ ಹೇಳುತ್ತದೆಯಾ : ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಟಾಂಗ್

ಬೆಂಗಳೂರು :  ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಹಿನ್ನೆಲೆ ಮಂಜುನಾಥಸ್ವಾಮಿ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಜೆಪಿ ಆಣೆ ಪ್ರಮಾಣಕ್ಕೆ ಮುಂದಾಗಿರುವ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ರಾಮನ ಹೆಸರಲ್ಲೇ ಲೂಟಿ ಮಾಡುವವರು.  ಅಂತವರು ಮಂಜುನಾಥಸ್ವಾಮಿ ಹೆಸರಲ್ಲಿ ಸತ್ಯ ಹೇಳುತ್ತಾರಾ?  ಎಂದು ಟಾಂಗ್ ಕೊಟ್ಟಿದ್ದಾರೆ.

ಅಯೋಧ್ಯೆಯಲ್ಲಿ ರಾಮನ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದರು.  ಇವತ್ತು ಮಂಜುನಾಥಸ್ವಾಮಿ ಹೆಸರಲ್ಲಿ ಸತ್ಯ ಹೇಳುತ್ತಾರಾ?  ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಾಗಿಲ್ಲ.  ಬಿಜೆಪಿವರಿಗೆ ಅವರ ಪಕ್ಷವನ್ನು ನೋಡಿಕೊಳ್ಳಲು ಹೇಳಿ. ಕಾಂಗ್ರೆಸ್ 100 ಭಾಗವಾದ್ರೂ ಆಗಲಿ ಅವರಿಗೇನು. ಬಿಜೆಪಿ ಅಧ್ಯಕ್ಷರು ಧರ್ಮಸ್ಥಳಕ್ಕೆ ಹೋಗೋಣ ಅಂತಾರೆ. ಬೇರೆಯವರು ಬೇಡ ಅಂತಿದ್ದಾರೆ.  ಇವರು ಎಷ್ಟು ಭಾಗ ಆಗಿದ್ದಾರೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular