ಮಂಡ್ಯ: ಮದ್ದೂರಿನ ಕೆ.ಹೊನ್ನಲಗೆರೆಯಲ್ಲಿ ಮೇ.19 ರಂದು ನಡೆದಿದ್ದ ಸುನೀಲ್ ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಿಶಾಂತ್ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮದ್ದೂರು ತಾಲ್ಲೂಕಿನ ಅಜ್ಜಹಳ್ಳಿ ಗ್ರಾಮದ ನಿಶಾಂತ್, ಕಾರ್ತಿಕ್, ಗೂಳೂರುದೊಡ್ಡಿಯ ರವಿ, ಬಂಧಿತ ಆರೋಪಿಗಳು. ಆರೋಪಿಗಳ ಎಡೆಮುರಿ ಕಟ್ಟಿ ಕೊಲೆಗೈದ ಮೂವರು ಆರೋಪಿಗಳ ಬಂಧಿಸಿದ್ದಾರೆ.
ಸ್ಕೇಚ್ ಹಾಕಿದ್ದೆ ಯಾರಿಗೋ? ಕೊಲೆ ಮಾಡಿದ್ದೆ ಯಾರನ್ನೋ.!
ಮದ್ದೂರಿನ ಕೆ.ಹೊನ್ನಲಗೆರೆ ಗ್ರಾಮದ ದೀಪಾ ಬಾರ್ ನಲ್ಲಿ ಬಾಸ್ ಅನ್ನೋ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೇ.19 ರಂದು ಕೆ.ಹೊನ್ನಲಗೆರೆಯ ದೀಪಾ ಬಾರ್ ನಲ್ಲಿ ಕುಡಿದು ಬಾರ್ ಕ್ಯಾಷಿಯರ್ ಗೆ ಬಾಸ್ ಬಾಸ್ ಎಂದು ನಿಶಾಂತ್ ಕರೆದಿದ್ದಾರೆ. ಈ ವೇಳೆ ಪಕ್ಕದ ಟೇಬಲ್ ನಲ್ಲಿ ಕುಳಿತು ಕುಡಿಯುತ್ತಿದ್ದ ಮೃತ ಸುನೀಲ್ ಅಂಡ್ ಟೀಮ್. ಕುಡಿದ ಮತ್ತಿನಲ್ಲಿ ಯಾವ ಸೀಮೆ ಬಾಸ್ ಅವನು ಎಂದು ಸುನೀಲ್ ನಿಂದ ಕಿರಿಕ್ ತೆಗೆದಿದ್ದಾರೆ. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಎರಡು ಗುಂಪುಗಳ ಜಗಳ ಬಿಡಿಸಿ ಕಳಿಸಿಲಾಗಿದೆ. ಬಳಿಕ ರಸ್ತೆ ಮಾರ್ಗ ಮಧ್ಯದಲ್ಲಿ ಮತ್ತೆ ಎರಡೂ ಗುಂಪುಗಳ ನಡುವೆ ಗಲಾಟೆಯಾಗಿ ಸುನೀಲ್ ನನ್ನು ಕೊಲೆ ಮಾಡಿದ್ದಾರೆ. ಬಳಿಕ ಪರಾರಿಯಾಗಿದ್ದರು.
ಪ್ರಮುಖ ಆರೋಪಿ ನಿಶಾಂತ್ ಗ್ರಾಮದ ಅಶೋಕ್ ಎಂಬುವವರ ಬಳಿ 5 ಲಕ್ಷ ಸಾಲ ಮಾಡಿಕೊಂಡಿದ್ದ
ಸಾಲ ಕೊಟ್ಟು ಪದೇ ಪದೇ ವಾಪಸ್ ಕೇಳುತ್ತಿದ್ದರು. ಈ ವೇಳೆ ಅಶೋಕ್ ಗೆ ಎದರಿಸಲು ಲಾಂಗ್ ತಂದು ಕಾರಿನಲ್ಲಿಟ್ಟಿದ್ದರು. ಕೆ.ಹೊನ್ನಲಗೆರೆಯ ದೀಪಾ ಬಾರ್ ನಲ್ಲಿ ಮದ್ಯಪಾನ ಮಾಡಿ ಅಶೋಕ್ ಗೆ ಕಾಯುತ್ತಿದ್ದರು.ಆದ್ರೇ ಯಾರಿಗೋ ಎದರಿಸಲು ಹೋಗಿ ಮತ್ತೆಯಾರನ್ನೋ ಕೊಲೆ ಮಾಡುವ ಸಂದರ್ಭ ಎದುರಾಗಿದೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದ 6 ತಿಂಗಳ ಹಿಂದೆಯಷ್ಟೆ ಸುನೀಲ್ ಮದುವೆಯಾಗಿದ್ದರು. ಸುನೀಲ್ ನನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದ ಮಂಡ್ಯ ಎಸ್ಪಿ. ಆರೋಪಿಗಳ ಬಂಧಿಸಿ ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದೆ ಎಂದು ಮಂಡ್ಯದಲ್ಲಿ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕುಡಿದ ಮತ್ತಿನಲ್ಲಿ ಶುರುವಾದ ಒಂದು ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬದುಕಿ ಬಾಳಬೇಕಿದ್ದವ ಬೀದಿ ಹೆಣವಾಗಿದ್ದಾನೆ.



