Wednesday, May 20, 2026
Google search engine

Homeರಾಜ್ಯಸುದ್ದಿಜಾಲಇಟಲಿ ಪ್ರಧಾನಿಗೆ ‘ಮೆಲೋಡಿ’ ಚಾಕೋಲೇಟ್ ಗಿಫ್ಟ್ ಕೊಟ್ಟ ಮೋದಿ

ಇಟಲಿ ಪ್ರಧಾನಿಗೆ ‘ಮೆಲೋಡಿ’ ಚಾಕೋಲೇಟ್ ಗಿಫ್ಟ್ ಕೊಟ್ಟ ಮೋದಿ

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಇಟಲಿಯ ರಾಜಧಾನಿ ರೋಮ್‌ಗೆ ಅಧಿಕೃತ ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೋದಿ ಅವರು ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೊಲೇಟ್ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮೋದಿ ಅವರು ಚಾಕೊಲೇಟ್ ನೀಡುತ್ತಿರುವ ಈ ವೀಡಿಯೋವನ್ನು ಮೆಲೋನಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉಡುಗೊರೆಗೆ ಧನ್ಯವಾದ ಅರ್ಪಿಸಿರುವ ಅವರು, “ಧನ್ಯವಾದಗಳು ನನ್ನ ಸ್ನೇಹಿತ” ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 9.6 ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ಬರೆದಿದೆ.

ರಾಜತಾಂತ್ರಿಕವಾಗಿ ಈ ಭೇಟಿ ಮಹತ್ವ ಪಡೆದಿದ್ದು, ಈ ಕುರಿತು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ” ಪ್ರಧಾನಿ ಮೆಲೋನಿ ಅವರೊಂದಿಗೆ ಭೋಜನ ಕೂಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನಾವು ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿದೆವು ಮತ್ತು ವಿವಿಧ ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡೆವು” ಎಂದು ತಿಳಿಸಿದ್ದಾರೆ. ಇಂದು ನಡೆಯಲಿರುವ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ. ಭಾರತ-ಇಟಲಿ ಸ್ನೇಹವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಚರ್ಚೆಯನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ. 

RELATED ARTICLES
- Advertisment -
Google search engine

Most Popular