ಮೈಸೂರು: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಮಾತನಾಡುತ್ತಾರೆ.ನನಗೆ ಪ್ರೇರಣೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್. ಯತೀಂದ್ರ ನಾಲ್ವಡಿ ಕೃಷ್ಣರಾಜರ ಇತಿಹಾಸವನ್ನು  ಓದಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸಲಹೆ ನೀಡಿದರು.ಮೈಸೂರಿನ ಖಾಸಗಿ ಹೋಟೆಲ್‌ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 100 ವರ್ಷಗಳ ಹಿಂದೆಯೇ ದೇಶದ ರಾಜಮನೆತನಗಳ ಟಾಪ್ 10 ಪಟ್ಟಿಯಲ್ಲಿ ಮೈಸೂರು ಇತ್ತು. ಅಂತಹ ಅಭಿವೃದ್ಧಿ ಕೆಲಸ ಮಾಡಿದ್ದು ಮೈಸೂರು ರಾಜಮನೆತನ.ಇದನ್ನು ಯತೀಂದ್ರ ತಿಳಿದುಕೊಳ್ಳಬೇಕು.151 ಕೈಗಾರಿಕೆಗಳನ್ನು ಸ್ಥಾಪಿಸಿದ್ದು ಮೈಸೂರು ರಾಜಮನೆತನ. ಸಿಮೆಂಟ್ ಸ್ಟಿಲ್ ಪೇಪರ್ ಗೋಲ್ಡ್ ಎಲ್ಲವನ್ನೂ ಸ್ಥಾಪನೆ ಮಾಡಿದ್ದು ಯಾರು ಎಂಬುದನ್ನು ನೆನಪಿಸಿಕೊಳ್ಳಬೇಕು. ಕೆ.ಆರ್.ಎಸ್ ಬ್ಯಾಂಕ್ ಗಳು, ಶಿಕ್ಷಣ ಸಂಸ್ಥೆಗಳು ಎಲ್ಲವನ್ನೂ ಮಾಡಿದ್ದು ಮೈಸೂರು ರಾಜರು.ಅಂತಹ ಮನೆತನಕ್ಕೆ ಅಗೌರವ ತೋರಿಸಿದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ನಮ್ಮ ಎಲ್ಲ ಸಂಸ್ಥೆಗಳಲ್ಲಿ ಅವರ ಫೋಟೋ ಇಟ್ಟಿದ್ದೇನೆ.ಇದೇ ಜಿಲ್ಲೆಯ ನೀವು ಅವರ ವಿರುದ್ಧ ಮಾತನಾಡೋದು ಸರಿಯಲ್ಲ. ಮೈಸೂರು ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಸರ್ಕಾರದ ಸಚಿವರಾದ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ.ಪೆಟ್ರೋಲ್ ಗೆ ಎಥನಾಲ್ ಮಿಕ್ಸ್ ಮಾಡ್ತಿದ್ದಾರೆ.ವಾಹನಗಳಿಗೆ ಡ್ಯಾಮೇಜ್ ಆಗ್ತಿದೆ ಎಂಬ ಸುಳ್ಳು ಆರೋಪ ಮಾಡ್ತಿದ್ದಾರೆ.ಎಥನಾಲ್ ನಿನ್ನೆ ಮೊನ್ನೆ ಬಂದಿಲ್ಲ.100 ವರ್ಷಗಳ ಹಿಂದೆಯೇ ಎಥನಾಲ್ ಆರಂಭವಾಗಿದೆ.ಅದು ಕೂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪ್ರಾರಂಭವಾಗಿದೆ.ಪೆಟ್ರೋಲ್ ಬಸ್ ಗಳಿಗೆ ಮಹಾರಾಷ್ಟ್ರಗಳಿಗೆ ಹೋಗಿತ್ತು.80 ವರ್ಷಗಳ ಹಿಂದಿನಿಂದ ಬ್ರೆಜಿಲ್ ದೇಶದಲ್ಲಿ ಎಥನಾಲ್ ಉಪಯೋಗ ಮಾಡ್ತಿದ್ದಾರೆ. ಪ್ರಸ್ತುತ ಎಂಜಿನ್ ಗಳಿಗೆ 30% ಎಥನಾಲ್ ಉಪಯೋಗ ಮಾಡಬಹುದು. ನಮ್ಮ ದೇಶದಲ್ಲಿ ಕೂಡ ಎಥನಾಲ್ ಗೆ ಹೊಸ ಪ್ರಯೋಗ ಮಾಡಿದ್ದೇವೆ.500 ಎಥನಾಲ್ ತಯಾರಿಕ ಘಟಕಗಳು ನಮ್ಮ ದೇಶದಲ್ಲಿದೆ.1700 ಕೋಟಿ ಲೀಟರ್ ಎಥನಾಲ್ ಮಿಕ್ಸ್ ಮಾಡಲಾಗುತ್ತಿದೆ.20% ಮಿಕ್ಸ್ ಮಾಡಲಾಗುತ್ತಿದೆ.ಪಂಜಾಬ್ ನಲ್ಲಿ ಈಗಾಗಲೇ ಟ್ರಯಲ್ ಆಗಿದೆ.ಪೆಟ್ರೋಲ್ ನಲ್ಲಿ ಎಥನಾಲ್ ಬ್ಲೆಂಡ್ ಆಗ್ತಿದೆ.ಡೀಸೆಲ್ ಜೊತೆ ಎಥನಾಲ್ ಬ್ಲೆಂಡ್ ಆಗ್ತಿಲ್ಲ.ಮುಂದಿನ ದಿನಗಳಲ್ಲಿ ಡೀಸೆಲ್ ಜೊತೆಗೂ ಬ್ಲೆಂಡ್ ಮಾಡುವ ಕೆಲಸ ಆಗತ್ತೆ ಎಂದರು. ರಿಜ್ವಾನ್ 65 ಸ್ಯಾಂಪಲ್ ತೆಗೆದುಕೊಂಡಿದ್ದಾರೆ.ಯಾರ ನೇತೃತ್ವದಲ್ಲಿ ಎಲ್ಲಿ ತೆಗೆದುಕೊಂಡರು.ಅದಕ್ಕೆ ಒಂದು ಪ್ರೋಸೆಸ್ ಇದೆ.ಇದು ಪೆಟ್ರೋಲ್ ಬಂಕ್ ಓನರ್ ಇರಬೇಕು.ಡಿಸಿ ಜೊತೆಗೆ ಆಹಾರ ಅಧಿಕಾರಿಗಳು ಇರಬೇಕು.ಅದನ್ನು ಬಿಟ್ಟು ಸುಮ್ಮನೆ ಏನೇನೋ ಹೇಳಬಾರದು.ಇದು ದಿಕ್ಕು ತಪ್ಪಿಸುವ ರಾಜಕಾರಣ ಎಂದು ರಿಜ್ವಾನ್ ಅರ್ಷದ್ ವಿರುದ್ಧ ಕಿಡಿಕಾರಿದರು.SIR ಕುರಿತಾಗಿ ಕೂಡ ಕಾಂಗ್ರೆಸ್ ಏನೇನೋ ಆರೋಪ ಮಾಡ್ತು. ಇವಿಎಂ ಕುರಿತು ಏನೇನೋ ಹೇಳಿದ್ರು.ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೇಲೆಯೇ ಚುನಾವಣೆ ಆಯ್ತು.ಅಲ್ಲಿ ಕೂಡ ನಮ್ಮ ಅಭ್ಯರ್ಥಿಗಳು ಗೆದ್ರು.ಸುಳ್ಳನ್ನು ನೂರು ಸಾರಿ ಹೇಳಿದ್ರು ಸತ್ಯ ಆಗಲ್ಲ ಎಂದರು.ಸೋನಿಯಾ ಗಾಂಧಿ ಬುಕ್ ಬರೆದಿದ್ದಾರೆ.ದೇಶದಲ್ಲಿ ತುರ್ತು ಪರಿಸ್ಥತಿ ಅನಾಹುತ ದೇಶದಲ್ಲಿ ಆದಂತಹ ಕೆಟ್ಟ ಆಡಳಿತದ ಬಗ್ಗೆ ಎಲ್ಲಿಯೂ ಬರೆದಿಲ್ಲ.ನಮ್ಮ ದೇಶದ ಆರ್ಥಿಕ ಸ್ಥಿತಿ 2014 ರಲ್ಲಿ ಏನಿತ್ತು ಈಗ ಜಗತ್ತಿನ ಆರ್ಥಿಕತೆಯಲ್ಲಿ ಭಾರತ ಎಲ್ಲಿದೆ.ಇದು ಮೋದಿ ಆಡಳಿತದ ಸಾಧನೆ ಎಂದರು. ನಿತಿನ್ ಗಡ್ಗರಿಗೆ, ಬಿಜೆಪಿಗೆ ಅನುಕೂಲ ಮಾಡಲು ಎಥನಾಲ್ ಮಿಕ್ಸ್ ಗೆ ಮುಂದಾಗಿದೆ ಎನ್ನುವ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಸುಳ್ಳು ಆರೋಪ. ಅವರ ಕಂಪನಿಯಲ್ಲಿ ದಿನಕ್ಕೆ 2 ಲಕ್ಷ ಎಥನಾಲ್ ಉತ್ಪಾದನೆ ಮಾಡ್ತಿದ್ದಾರೆ.ನಾನು 28 ಲಕ್ಷ ಲೀಟರ್ ಉತ್ಪಾದನೆ ಮಾಡ್ತಿದ್ದೇನೆ.ಏಷ್ಯಾದ ಮೊದಲ ಉತ್ಪಾದಕ ನಾನು.ಹೀಗಾಗಿ ಇದೊಂದು ಸುಳ್ಳು ಆರೋಪ.ನಿತಿನ್ ಗಡ್ಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಎಥನಾಲ್ ಮಿಕ್ಸ್ ಮಾಡಲು ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದರು. ರಿಜ್ವಾನ್ ಅರ್ಷದ್ ಒಂದು ಕಮಿಟಿ ಮಾಡಲಿ.ದೇಶದ ಯಾವುದೇ ಮೂಲೆಯಲ್ಲಿ ಯಾವ ಪೆಟ್ರೋಲ್ ಬಂಕ್ ನಲ್ಲಿ ಟೆಸ್ಟ್ ಮಾಡಿ ಇದನ್ನು ಪ್ರೂವ್ ಮಾಡಲಿ.ಈಗ ಮಾಡಿರೋ ಸ್ಯಾಂಪಲ್ ಗಳ ವಿಡಿಯೋ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನಾನು ರಾಜ್ಯಾಧ್ಯಕ್ಷ ರೇಸ್ ನಲ್ಲಿ ಇಲ್ಲ.ಲಾಭಿಯನ್ನು ಮಾಡ್ತಿಲ್ಲ.ಪಕ್ಷ ಗುರುತಿಸಿ ಎಂ.ಎಲ್. ಎ ಮಂತ್ರಿ ಎಲ್ಲ ಸ್ಥಾನವನ್ನು ಕೊಟ್ಟಿದೆ. ಸದ್ಯಕ್ಕೆ ನಾನು ಆ ಸ್ಥಾನ ಕೇಳುತ್ತಿಲ್ಲ.ಕೊಟ್ಟರೆ ಜವಾಬ್ದಾರಿ ನಿಭಾಸುತ್ತೇನೆ.ವಿಜಯೇಂದ್ರ ಒಳ್ಳೆ ಕೆಲಸ ಮಾಡಿದ್ದಾರೆ.ಒಳ್ಳೊಳ್ಳೆ ಹೋರಾಟ ಮಾಡಿದ್ದಾರೆ.ಅವರನ್ನೇ ಮುಂದುವರೆಸಿದರು ಸ್ವಾಗತ.ಬದಲಾವಣೆ ಆದ್ರೆ ಯಾರೇ ಅಧ್ಯಕ್ಷರಾದರು ಪಕ್ಷವನ್ನು  ಬಲಪಡಿಸಲು ತನು ಮನ ಧನ ಹಾಕಿ ಎನ್.ಡಿ. ಎ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತೀವಿ ಎಂದರು. ಪಕ್ಷದಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣ ಇಲ್ಲ ಹಳದಿ ಕಣ್ಣಿಗೆ ಕಾಣೋದು ಎಲ್ಲ ಹಳದಿ ಅಂತ ಕೆಲವರು ಹೇಳ್ತಾರೆ. ಇದರಲ್ಲಿ ಉರುಳಿಲ್ಲ ಎಂದರು.