ಮೈಸೂರು : ಮೈಸೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ವತಿಯಿಂದ ಖಾಲಿ ಇರುವ ಒಂದು ಡಿ ದರ್ಜೆ ನೌಕರ/ಜವಾನ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು, ಕಚೇರಿಯಲ್ಲಿ ಇತರೆ ಕೆಲಸಗಳನ್ನು ನಿರ್ವಹಿಸಿದ ಅನುಭವ ಹೊಂದಿರಬೇಕು ಹಾಗೂ ವಯಸ್ಸು 40 ವರ್ಷ ಮೀರಿರಬಾರದು. ಗೌರವಧನ ಪ್ರತಿ ತಿಂಗಳಿಗೆ 18,776 ರೂ ನೀಡಲಾಗುವುದು. ಆಸಕ್ತರು ದೃಢೀಕೃತ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಕಚೇರಿ ಕೆಲಸದ ಅನುಭವ ಪ್ರಮಾಣಪತ್ರ ಮತ್ತು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಸ್ವವಿವರಗಳನ್ನು ಲಗತ್ತಿಸಿ ಡಿಸೆಂಬರ್ 03ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.ಅರ್ಜಿಗಳನ್ನು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಮೈಸೂರು ಜಿಲ್ಲೆ, ಕಾರ್ಮಿಕ ಭವನ, ಕೆ.ಎಸ್.ಎಸ್.ಇ.ಟಿ.ಸಿ, ಹರಳಹಳ್ಳಿ ಫಾರಂ ಎದುರು, ಆರ್.ಟಿ.ಒ ಆಫೀಸ್, ಮೈಸೂರು - 570025 ಗೆ  ಸಲ್ಲಿಸಬೇಕಾಗಿದೆ  ಎಂದು  ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.