ನಾಳೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ–2026 ಸಮಾರೋಪ ಸಮಾರಂಭ

ಮೈಸೂರು : ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯಗಳು, ಮೈಸೂರು ಗ್ರಂಥಪಾಲಕರು ಹಾಗೂ ಮಾಹಿತಿ ವಿಜ್ಞಾನಿಗಳ ಸಂಘ (MyLISA) ಮತ್ತು ಬಾಲ್ಯ ಫೌಂಡೇಶನ್ (ರಿ.) ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ –2026 ಸಮಾರೋಪ ಸಮಾರಂಭವನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪುನಗರ ಶಾಖಾ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ.ಮಾನಸ ಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಮೈಸೂರು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರೂ ಆದ ಡಾ. ಎಂ. ಚಂದ್ರಶೇಖರ್ ಅವರು ಸಮಾರಂಭದ ಅಧ್ಯಕ್ಷತೆವಹಿಸಲಿದ್ದಾರೆ.ಹಿರಿಯ ಸಾಹಿತಿ ಪ್ರೊ. ಮೈಸೂರು ಕೃಷ್ಣಮೂರ್ತಿ ಅವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಮೈಸೂರಿನ ಸೈಬರ್ ಕ್ರೈಮ್ ಠಾಣಾ ಅಧಿಕಾರಿಗಳಿಂದ ಸೈಬರ್ ಕ್ರೈಂ ಕುರಿತು ವಿಶೇಷ ಉಪನ್ಯಾಸ ಮಾಡಲಿದ್ದಾರೆ. ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ ಬಿ. ಅವರು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ–2026ರ ನವೆಂಬರ್ 14 ರಿಂದ 20 ರವರೆಗೆ ನಡೆದ ಕಾರ್ಯಕ್ರಮಗಳ ಅವಲೋಕನ ಮಾಡಲಿದ್ದಾರೆ.ಇದೇ ಸಂದರ್ಭದಲ್ಲಿ ವಿಶೇಷ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸದಸ್ಯರಾದವರಿಗೆ ಪುಸ್ತಕ ಉಡುಗೊರೆ, ಉತ್ತಮ ಓದುಗರಿಗೆ ನೆನಪಿನ ಕಾಣಿಕೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಕುವೆಂಪುನಗರ ಶಾಖಾ ಗ್ರಂಥಾಲಯ ಸಮಿತಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ
ಸಂಬಂಧಿತ ಸುದ್ದಿಗಳು

ಡಿ.12ರಂದು ಲೋಕ ಅದಾಲತ್ ಕಾರ್ಯಕ್ರಮ
ಮೈಸೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು ವತಿಯಿಂದ ಡಿ.12ರಂದ…
◷ 19/11/2026
ಭಕ್ತ ಕನಕದಾಸರ ಜಯಂತಿ : ಅಗತ್ಯ ಸಿದ್ದತೆಗೆ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೂಚನೆ
ಬಳ್ಳಾರಿ : ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಕೇಂದ್ರದಲ್ಲಿ ನ. 27 ರಂದು ಸಂತ ಶ್…
◷ 19/11/2026
ಆಶಾ ಕಾರ್ಯಕರ್ತೆಯರ ಸಭೆ ನಡೆಸಿ ಸಮಸ್ಯೆ ಆಲಿಸಿದ ಸಿಎಂ
ಬೆಂಗಳೂರು : ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಶಾ…
◷ 19/11/2026
ಎಂ.ಕೆ ಮಲ್ಲೇಶ್ ಗೆ ಅಭಿನಂದನೆ
ಮೈಸೂರು : ಸರ್ಕಾರದ ಆದೇಶದಂತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇಲ್ಲಿನ ಸಂಶೋಧನಾಧಿಕಾರಿಯಾಗಿ ಇಂದು ಕಾರ್ಯ ವರದಿ ಮಾಡಿಕೊ…
◷ 19/11/2026
