ಕಾಡಿನಲ್ಲಿ ಪ್ಲಾಸ್ಟಿಕ್ ಬಾಟಲಿ ತಿನ್ನಲು ಯತ್ನಿಸಿದ ಕಾಡಾನೆ: ಪರಿಸರವಾದಿಗಳ ಆಕ್ರೋಶ
ಬಂಡೀಪುರ ಅರಣ್ಯ ಮಾರ್ಗದಲ್ಲಿ ಪ್ರವಾಸಿಗರ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ

ಗುಂಡ್ಲುಪೇಟೆ: ಬಂಡೀಪುರ ಅರಣ್ಯದ ಮಾರ್ಗವಾಗಿ ಊಟಿಗೆ ತೆರಳುವ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ಕಾಡಾನೆಯೊಂದು ತನ್ನ ಸೊಂಡಿಲಿನಿಂದ ಎತ್ತಿಕೊಂಡು ತಿನ್ನಲು ಪ್ರಯತ್ನಿಸಿರುವ ಘಟನೆ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಬಂಡೀಪುರ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಪ್ರವಾಸಿಗರು ಎಸೆದಿದ್ದ ಪ್ಲಾಸ್ಟಿಕ್ ಬಾಟಲಿ ಕಾಡಾನೆಯ ಗಮನಕ್ಕೆ ಬಂದಿದೆ. ಆನೆಯು ತನ್ನ ಸೊಂಡಲಿನಿಂದ ಬಾಟಲಿಯನ್ನು ಎತ್ತಿಕೊಂಡು ಆಹಾರವೆಂದು ಭಾವಿಸಿ ತಿನ್ನಲು ಪ್ರಯತ್ನಿಸಿದೆ. ಈ ದೃಶ್ಯ ಪರಿಸರ ಕಾಳಜಿಯುಳ್ಳವರಲ್ಲಿ ಆತಂಕ ಮೂಡಿಸಿದೆ.ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದರಿಂದ ವನ್ಯಜೀವಿಗಳ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗುತ್ತಿದೆ. ಆಹಾರ ಅರಸಿಕೊಂಡು ರಸ್ತೆಯಂಚಿಗೆ ಬರುವ ಪ್ರಾಣಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಆಹಾರವೆಂದು ಭಾವಿಸಿ ಸೇವಿಸುವ ಸಾಧ್ಯತೆಗಳಿದ್ದು, ಇದರಿಂದ ಅವುಗಳ ಜೀವಕ್ಕೆ ಅಪಾಯ ಉಂಟಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಬಂಡೀಪುರದಂತಹ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಪ್ರವಾಸಿಗರು ಜವಾಬ್ದಾರಿಯಿಂದ ವರ್ತಿಸಬೇಕು. ಅರಣ್ಯ ಮಾರ್ಗದಲ್ಲಿ ಪ್ಲಾಸ್ಟಿಕ್ ಬಾಟಲಿ, ಆಹಾರದ ಪೊಟ್ಟಣ ಹಾಗೂ ಇತರೆ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಅರಣ್ಯದ ಸ್ವಚ್ಛತೆ ಕಾಪಾಡಲು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.ಕಾಡು ಪ್ರಾಣಿಗಳ ಆವಾಸ ಸ್ಥಾನವನ್ನು ಕಸದ ತಾಣವನ್ನಾಗಿ ಮಾಡದೆ, ಪ್ರಕೃತಿ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಪ್ರತಿಯೊಬ್ಬ ಪ್ರವಾಸಿಗರೂ ಕೈಜೋಡಿಸಬೇಕಿದೆ.
ಸಂಬಂಧಿತ ವಿಡಿಯೊ / Watch video
ಸಂಬಂಧಿತ ಸುದ್ದಿಗಳು

2030ರ ವೇಳೆಗೆ ಬಾಲ್ಯವಿವಾಹ ಮುಕ್ತ ಭಾರತದ ಗುರಿ ಸಾಧಿಸಲು ನಾಗರಿಕರು ಸಕ್ರಿಯವಾಗಿ ಕೈಜೋಡಿಸಬೇಕು : ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಕರೆ
ನವದೆಹಲಿ : ದೇಶದ ಪ್ರತಿಯೊಂದು ಮಗುವಿಗೂ ಸುರಕ್ಷಿತ ಬಾಲ್ಯ ಮತ್ತು ಶಿಕ್ಷಣ ಪಡೆಯುವ ಅವಕಾಶ ಸಿಗುವಂತೆ ಸರ್ಕಾರ ಶ್ರಮಿಸುತ್ತಿದೆ ಎಂದು …
◷ 28/11/2026
ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ : ಇಂದು ಪ್ರಶಸ್ತಿಗಾಗಿ ಭಾರತ-ಚೀನಾ ಹಣಾಹಣಿ
ಭೋಪಾಲ್ : ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಇಂದು ಬಲಿಷ್…
◷ 28/11/2026
ಭಾರತೀಯ ನೌಕಾಪಡೆಯ ಭವಿಷ್ಯ ರೂಪಿಸುವಲ್ಲಿ ಕೆಡೆಟ್ಗಳ ಪಾತ್ರ ನಿರ್ಣಾಯಕ : ರಾಷ್ಟ್ರಪತಿ ದ್ರೌಪದಿ ಮುರ್ಮು
ಕಣ್ಣೂರು : ಸಶಸ್ತ್ರ ಪಡೆಗಳನ್ನು ಬಲಪಡಿಸುವಲ್ಲಿ ಮತ್ತು ಕಡಲ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಭಾರತವು ಕ್ಷಿಪ್ರಗತಿಯಲ್ಲಿ ಪ್ರಗತಿ ಸ…
◷ 28/11/2026
ತಿರುಪ್ಪರಂಕುಂದ್ರಂ ದೇವಾಲಯದ ಬೆಟ್ಟದಲ್ಲಿ ಇಂದು ಬೆಳಗಲಿದೆ ಕಾರ್ತಿಕ ದೀಪ : ಸ್ಥಳದಲ್ಲಿ ಸಿಆರ್ ಪಿಎಫ್ ಯೋಧರು
ಚೆನ್ನೈ: ಸುಪ್ರೀಂಕೋರ್ಟ್ ತಮಿಳುನಾಡಿನ ಮಧುರೈನ ತಿರುಪ್ಪರಂಕುಂದ್ರಂ ದೇವಾಲಯದ ಬೆಟ್ಟದ ಮೇಲಿರುವ ದೀಪತೂನ್ ಕಂಬದಲ್ಲಿ ಇಂದು ಕಾರ್ತಿಕ…
◷ 28/11/2026
