ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ದಾಸ ಶೇಷ್ಠ ಭಕ್ತ ಕನಕದಾಸರು  ೫೦೦ ವರ್ಷಗಳ ಹಿಂದೆ ಕುಲ- ಕುಲವೆಂದು ಹೊಡೆದಾಡದಿರಿ  ಕುಲದ ನೆಲೆಯ ಬಲ್ಲಿರಾ ಎಂದ ಹೇಳಿದಂತೆ ಜಾತಿ ವ್ಯವಸ್ಥೆ ಹೋಗದಿದ್ದರೆ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.  ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಕುರುಬರ ಸಂಘ, ತಾಲೂಕು ಆಡಳಿತ, ಪುರಸಭೆ ಹಾಗೂ ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ ಭಕ್ತ ಕನಕದಾಸರ ೫೩೯ನೇ ಜಯಂತ್ಯೋತ್ಸವ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಹೆಣ್ಣು ಮತ್ತು ಗಂಡು  ಎರಡು ಜಾತಿಗಳಿವೆ ಎಂಬುವುದನ್ನು  ಎಲ್ಲರೂ ಅರಿಯಬೇಕು ಅದರ ಬದಲು ಜಾತಿ, ಧರ್ಮ ಮತ್ತು ಪಂತಗಳೆಂದು ಬೇರ್ಪಡಿಸುತ್ತಿದ್ದು  ಇದರಿಂದ  ಸಮಾಜದಲ್ಲಿ ಅಶಾಂತಿ  ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ ಆದ್ದರಿಂದ ಸಮಾಜದ ಬಂಧುಗಳು ಕನಕದಾಸರು ಸೇರಿದಂತೆ ಮಹಾತ್ಮರ ಸಂದೇಶಗಳನ್ನು ಪಾಲನೇ ಮಾಡಬೇಕೆಂದು ಸಲಹೆ  ನೀಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ ಭಕ್ತಿಯ ಮೂಲಕ ದೇವರನ್ನೇ ತಮ್ಮತ್ತ ತಿರುಗಿಸಿಕೊಂಡ ಕನಕದಾಸರ ಜಯಂತಿಯನ್ನು   ಆಚರಣೆ ಮಾಡುವುದರ ಜತೆಗೆ ಅವರ ದಾಸ ಸಾಹಿತ್ಯವನ್ನು ಜನತೆಗೆ ಪರಿಚಯಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡಬೇಕು ಎಂದು ಹೇಳಿದರು.ಉಡುಪಿಯ ಅಷ್ಟ ಮಠಗಳನ್ನು ಸರ್ಕಾರ ರಾಷ್ಟ್ರೀಕರಣಗೊಳಿಸಬೇಕು ಮತ್ತು ಶ್ರೀಕೃಷ್ಣ ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಳ್ಳಬೇಕು. ಆಗ ಮಾತ್ರ ದೇವಸ್ಥಾನಕ್ಕೆ ಬರುವ ಹಣ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಈ ಬಗ್ಗೆ ಶಾಸಕ ಡಿ.ರವಿಶಂಕರ್ ಅವರು ಸದನದಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಒತ್ತಾಯಿಸಿದರು.  ಉಪನ್ಯಾಸಕ ಪ್ರೇಮಕುಮಾರ್ ಪ್ರಧಾನ ಭಾಷಣ ಮಾಡಿದರು, ತಹಶೀಲ್ದಾರ್ ಜಿ,ಸುರೇಂದ್ರಮೂರ್ತಿ, ತಾ.ಪಂ. ಇಓಗಳಾದ ಕೆ.ಜೆ.ಮಲ್ಲಿಕಾರ್ಜುನ್, ಎ.ಎಸ್.ರವಿ, ಕುರುಬರ ಸಂಘದ ಅಧ್ಯಕ್ಷರಾದ ಸಿದ್ದರಾಮೇಗೌಡ, ಜೆ.ಶಿವಣ್ಣ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ಎಂ.ನಾಗರತ್ನಮ್ಮ, ತಿಮ್ಮಶೆಟ್ಟಿ, ಚಿಕ್ಕೇಗೌಡ, ಬಿಎಸ್‌ಎನ್‌ಎಲ್ ಕೃಷ್ಣ, ಎ.ಎಸ್.ರಾಮಪ್ರಸಾದ್ ಅವರುಗಳಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಜಿ.ಪಂ. ಮಾಜಿ ಸದಸ್ಯ ಮಾರ್ಚಹಳ್ಳಿ ಶಿವರಾಂ, ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಟಿಎಪಿಸಿಎಂಎಸ್ ಎಸ್.ಸಿದ್ದೇಗೌಡ, ಚಾಮುಂಡೇಶ್ವರಿ ದೇವಸ್ಥಾನದ ಪ್ರಾಧಿಕಾರದ ಸದಸ್ಯ ನರಸಿಂಹರಾಜು, ಗಾಂಧಿಸ್ಮಾರಕ ನಿಗಮ ಮಂಡಳಿಯ ಸದಸ್ಯ ಮಹದೇವನಾಯಕ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಾಮಧಾರಿಗೌಡ ಸಮಾಜದ ಅಧ್ಯಕ್ಷ ಸುಮಂತ್, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಕಾಟ್ನಾಳುಮಹದೇವ್,ಇ ಡಾ.ಡಿ.ನಟರಾಜು, ಗರಡಗಂಭಸ್ವಾಮಿ, ಕೋಳಿಪ್ರಕಾಶ್, ಜಿ.ಎಂ.ಹೇಮಂತ್ ಮತ್ತೀತರರು ಹಾಜರಿದ್ದರು.