ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ : ಇಂದು ಪ್ರಶಸ್ತಿಗಾಗಿ ಭಾರತ-ಚೀನಾ ಹಣಾಹಣಿ

ಭೋಪಾಲ್ : ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಇಂದು ಬಲಿಷ್ಠ ಚೀನಾ ತಂಡವನ್ನು ಎದುರಿಸಲಿದೆ. ಭೋಪಾಲ್‌ನ ಅಂತಾರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ಈ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.ನಿನ್ನೆ ಸಂಜೆ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ 6-2 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯದುದ್ದಕ್ಕೂ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತೀಯ ವನಿತೆಯರು, ದಾಖಲಿಸಿದ ಆರು ಗೋಲುಗಳಲ್ಲಿ ಐದು ಗೋಲುಗಳನ್ನು ಪೆನಾಲ್ಟಿ ಕಾರ್ನರ್ ಮೂಲಕವೇ ಗಳಿಸಿರುವುದು ವಿಶೇಷ.ಪಂದ್ಯದ 10ನೇ ನಿಮಿಷದಲ್ಲಿ ಮುಮ್ತಾಜ್ ಖಾನ್ ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ 18ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲು ಬಾರಿಸಿ ಮುನ್ನಡೆಯನ್ನು ಹೆಚ್ಚಿಸಿದರು. ದೀಪಿಕಾ ಎರಡು ಗೋಲು ಗಳಿಸಿ ಮಿಂಚಿದರೆ, ಸುನೆಲಿತಾ ಟೊಪ್ಪೊ ಮತ್ತು ಇಶಿಕಾ ತಲಾ ಒಂದು ಗೋಲು ದಾಖಲಿಸಿ ಭಾರತದ ಭರ್ಜರಿ ಗೆಲುವಿಗೆ ಕಾರಣರಾದರು.ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ 1-0 ಅಂತರದ ರೋಚಕ ಗೆಲುವು ಸಾಧಿಸಿದ ಚೀನಾ ತಂಡ ಫೈನಲ್ ಪ್ರವೇಶಿಸಿದೆ.
ಸಂಬಂಧಿತ ಸುದ್ದಿಗಳು

ಭಾರತದ ವಿರುದ್ಧ ಮೊದಲ ದಿನ ನ್ಯೂಜಿಲೆಂಡ್ 246 ರನ್
ನವದೆಹಲಿ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿದ್ದು, ಮೊದಲ ದಿನದಾಟ…
◷ 27/11/2026
ಇತಿಹಾಸ ಸೃಷ್ಟಿಸಿದ ಭಾರತೀಯ ಮಹಿಳಾ ಹಾಕಿ ತಂಡ : ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲ ಬಾರಿಗೆ 5ನೇ ಸ್ಥಾನಕ್ಕೆ ಲಗ್ಗೆ
ಭೋಪಾಲ್ : ಭಾರತೀಯ ಮಹಿಳಾ ಹಾಕಿ ತಂಡವು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲ ಬಾರಿಗೆ ಐದನೇ ಸ್…
◷ 25/11/2026
ಪ್ರೊ ರೆಸ್ಲಿಂಗ್ ಲೀಗ್ (PWL) 6ನೇ ಆವೃತ್ತಿ : ದೆಹಲಿಯಲ್ಲಿ ಪಂದ್ಯಾವಳಿ, ನವೆಂಬರ್ 30ರಂದು ಆಟಗಾರರ ಹರಾಜು
ನವದೆಹಲಿ : ಪ್ರೊ ರೆಸ್ಲಿಂಗ್ ಲೀಗ್ (ಪಿಡಬ್ಲ್ಯೂಎಲ್) ತನ್ನ ಆರನೇ ಆವೃತ್ತಿಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2027ರ ಜನ…
◷ 24/11/2026
ನ್ಯೂಜಿಲೆಂಡ್ ವಿರುದ್ಧದ ಹಾಕಿ ಸರಣಿಯನ್ನು 1-0 ಅಂತರದಿಂದ ಗೆದ್ದ ಭಾರತ
ಆಕ್ಲೆಂಡ್ : ಆಕ್ಲೆಂಡ್ನ ಲಾಯ್ಡ್ ಎಲ್ಸ್ಮೋರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ '2026 ಭಾರತ-ನ್ಯೂಜಿಲೆಂಡ್ ಕ್ರೀಡಾ ಏ…
◷ 24/11/2026
