ಗ್ರಾಮೀಣ ರಸ್ತೆಗೆ 10000 ಕೋಟಿ ಅನುದಾನ : ಸಚಿವ ಈಶ್ವರ ಖಂಡ್ರೆ

ಮೈಸೂರು : ರಾಜ್ಯದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 10,000 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡುವುದಾಗಿ ಪ್ರಕಟಿಸಿದ್ದು, ಇದು ಈವರೆಗಿನ ಅತಿ ದೊಡ್ಡ ಅನುದಾನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.ಮೈಸೂರಿನಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಅಭಿವೃದ್ಧಿಗೆ ಹಣದ ಕೊರತೆ ಇಲ್ಲ, ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು 10 ಸಾವಿರ ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ ಎಂದರು. ಅದೇ ರೀತಿ ಪ್ರತಿ ಗ್ರಾಮ ಪಂಚಾಯತಿಗೂ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು 50 ಲಕ್ಷ ರೂ.ಗಳಿಂದ 1 ಕೋಟಿ ರೂ. ನೀಡುವುದಾಗಿಯೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ತಿಳಿಸಿದರು.ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ 117 ಕೋಟಿ ರೂ.ಗಳನ್ನು ಗ್ರಾಮೀಣ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗಿತ್ತು. ಈಗ ಡಿ.ಕೆ. ಶಿವಕುಮಾರ್ ಅವರು, ಎಲ್ಲ ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1 ಕೋಟಿ ಬಿಡುಗಡೆಮಾಡಿದ್ದು 306 ಕೋಟಿ ರೂ. ಕುಡಿಯುವ ನೀರಿಗಾಗಿಯೇ ಲಭ್ಯವಿದೆ ಎಂದರು.ಜನವರಿಯಲ್ಲಿ ತಾ.ಪಂ, ಜಿ.ಪಂ. ಚುನಾವಣೆ:ಸರ್ಕಾರ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಯಲು ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದೆ. ರಾಜ್ಯ ಚುನಾವಣೆ ಆಯೋಗಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು. ಬರುವ ಜನವರಿ 2ನೇ ವಾರದೊಳಗೆ ಚುನಾವಣೆ ನಡೆಯಲಿದೆ ಎಂದರು.ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೊಸ ಮತದಾರರ ಪಟ್ಟಿ ಬಳಕೆ ಮಾಡುತ್ತೀರೋ, ಹಳೆಯ ಮತದಾರರ ಪಟ್ಟಿಯ ಆಧಾರದಲ್ಲಿ ನಡೆಸುತ್ತೀರೋ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾಳೆ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಹಾಲಿನ ದರ ಏರಿಕೆ ಸಮರ್ಥನೆ:ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಎಲ್ಲ ಜೀವನಾವಶ್ಯಕ ವಸ್ತುಗಳ ದರವೂ ಹೆಚ್ಚಳವಾಗಿದ್ದು, ಹೈನುಗಾರಿಕೆ ಮಾಡುವ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಸಂಬಂಧಿತ ಸುದ್ದಿಗಳು

ಕೇಂದ್ರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರೆ ಬಸ್ ಪ್ರಯಾಣ ದರ ಇಳಿಸಲು ಸಿದ್ಧ : ಸಿಎಂ ಡಿಕೆಶಿ
ಬೆಂಗಳೂರು : "ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದರೆ ಅದಕ್ಕೆ ಅನುಗುಣವಾಗಿ ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ…
◷ 04/11/2026
ಕುಮಾರಸ್ವಾಮಿ ತನಿಖೆಗೆ ಸಹಕಾರ ಕೊಡಲಿ : ಸಚಿವ ಹೆಚ್.ಸಿ ಬಾಲಕೃಷ್ಣ ಲೇವಡಿ
ರಾಮನಗರ : ಕುಮಾರಸ್ವಾಮಿಯವರು ತನಿಖೆಗೆ ಸಹಕಾರ ಕೊಟ್ಟರೆ ಯಾರು ಸ್ಟಿಂಗ್ ಆಪರೇಷನ್ ಕೆಲಸ ಮಾಡಿದ್ದಾರೆ ಎಂಬುದು ಹೊರಬಂದು, ಅವರ ಮೇಲಿರ…
◷ 04/11/2026
ಅಮೆರಿಕ ಮಧ್ಯಂತರ ಚುನಾವಣೆ : ಕಾಂಗ್ರೆಸ್ನ ಉಭಯ ಸದನಗಳಲ್ಲಿ ಡೆಮೋಕ್ರಾಟ್ಗಳಿಗೆ ಭಾರೀ ಜಯ
ವಾಷಿಂಗ್ಟನ್ : ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ವಿರೋಧ ಪಕ್ಷವಾದ ಡೆಮೋಕ್ರಾಟಿಕ್ ಪಾರ್ಟಿ ಐತಿಹಾಸಿಕ ಜಯಗಳಿಸಿದ್ದು, ಯುಎಸ್ ಕಾಂಗ್ರ…
◷ 04/11/2026
ಮೈಸೂರು ಅರಮನೆ ಖಾಸಗಿ ಸ್ವತ್ತು , ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ : ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ
ಮೈಸೂರು : ಅಂಬಾರಿ, ಸಿಂಹಾಸನ ಎರಡು ನಮ್ಮ ವಶದಲ್ಲಿದೆ. ಹಿಂದೆಯೂ ನಮ್ಮ ವಶದಲ್ಲಿತ್ತು. ನಮ್ಮ ವಶದಲ್ಲೇ ಇರುತ್ತದೆ ಎಂದು ರಾಜಮಾತೆ ಪ್ರ…
◷ 04/11/2026
