ನಾಳೆ ಪಂದ್ಯಕ್ಕೆ ಡೆವೊನ್ ಕಾನ್ವೇ ಅಲಭ್ಯ?

ಆಕ್ಲೆಂಡ್ : ಭಾರತ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಿಂದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಹೊರಗುಳಿಯಲಿದ್ದಾರೆ. ಬುಧವಾರ (ನಾಳೆ) ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಮುನ್ನಾದಿನದಂದು ನ್ಯೂಜಿಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅಭ್ಯಾಸದ ವೇಳೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ಈ ಪಂದ್ಯದಲ್ಲಿ ಆಡುವುದಿಲ್ಲ ಎಂದು ತಿಳಿದು ಬಂದಿದೆ. ಆತಿಥೇಯ ತಂಡವು ಈಗಾಗಲೇ ರಚಿನ್ ರವೀಂದ್ರ ಮತ್ತು ಮಾರ್ಕ್ ಚಾಪ್‌ಮನ್ ಅವರ ಸೇವೆಯನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಕಾನ್ವೆ ಮೊದಲ ಪಂದ್ಯದಿಂದ ಹೊರಬಿದ್ದಿರುವುದು ಕಿವೀಸ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಡನ್ ಪಾರ್ಕ್‌ನಲ್ಲಿ ಮಂಗಳವಾರ ತಂಡದ ತರಬೇತಿಯ ಸಮಯದಲ್ಲಿ ಡೆವೊನ್ ಕಾನ್ವೇ ಮತ್ತು ಮ್ಯಾಟ್ ಹೆನ್ರಿ ಕ್ಯಾಚ್ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಡಿಕ್ಕಿ ಹೊಡೆದರು. ಇಬ್ಬರೂ ಆಟಗಾರರಿಗೆ ತಕ್ಷಣವೇ ಸ್ಥಳದಲ್ಲೇ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದರು ಮತ್ತು ತಲೆಗೆ ಗಾಯವಾಗಿದೆ ಎಂದು ಹೇಳಲಾಗಿತ್ತು. ಹೆಚ್ಚಿನ ಪರೀಕ್ಷೆಗಾಗಿ ಕಾನ್ವೇ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಯಿತು, ಈ ವೇಳೆ ಅವರಿಗೆ ಹೆಚ್ಚಿನ ಗಾಯವಾಗಿರುವುದು ದೃಢಪಟ್ಟಿತು. ಇದರಿಂದಾಗಿ ಬುಧವಾರ ಭಾರತ ವಿರುದ್ಧದ ಮೊದಲ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ" ಎಂದು ನ್ಯೂಜಿಲೆಂಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಉಭಯ ಆಟಗಾರರ ಮೇಲೆ ನಿಗಾ ಮುಂದುವರಿಯಲಿದೆ. ಏಕದಿನ ಸರಣಿ'ಯಲ್ಲಿ ಅವರ ಭಾಗವಹಿಸುವಿಕೆಯ ಕುರಿತಾದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಬಂಧಿತ ಸುದ್ದಿಗಳು

ಶೂಟಿಂಗ್ : ಪುರುಷರ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ!
ನವದೆಹಲಿ : ದೋಹಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ (ISSF) ವಿಶ್ವ ಶೂಟಿಂಗ್ ಚಾಂಪಿಯನ್ ಷಿಪ್ ನ ಪುರುಷರ 50 ಮೀಟರ್ ಪಿಸ್ತೂಲ್ …
◷ 03/11/2026
ಮೈಸೂರಿನಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಅದ್ಧೂರಿ ಚಾಲನೆ
ರಾಜ್ಯದ 1,120ಕ್ಕೂ ಹೆಚ್ಚು ಆಟಗಾರರ ಸಮಾಗಮ : ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರಿಂದಲೂ ಸ್ಪರ್ಧೆ
◷ 03/11/2026
ಭಾರತ-ಪಾಕಿಸ್ತಾನ 2027 ಏಕದಿನ ವಿಶ್ವಕಪ್ ಪಂದ್ಯಕ್ಕೆ ಭಾರೀ ಕ್ರೇಜ್
ಟಿಕೆಟ್ ಗಾಗಿ ಹರಿದುಬಂತು 84 ಲಕ್ಷ ಅರ್ಜಿ!
◷ 03/11/2026
ಬಳ್ಳೂರು ಟಿಪ್ಪರ್ ಅಪಘಾತ: ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಶಾಯನ್ ಚಿಕಿತ್ಸೆ ಫಲಿಸದೆ ಸಾವು
ಮೂವರು ಆರೋಪಿಗಳ ಬಂಧನ
◷ 03/11/2026
