ಶೂಟಿಂಗ್ : ಪುರುಷರ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ!

ನವದೆಹಲಿ : ದೋಹಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ (ISSF) ವಿಶ್ವ ಶೂಟಿಂಗ್ ಚಾಂಪಿಯನ್ ಷಿಪ್ ನ ಪುರುಷರ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ರವೀಂದರ್ ಸಿಂಗ್, ಸೌರಭ್ ಚೌಧರಿ ಹಾಗೂ ಅಮನ್‌ಪ್ರೀತ್ ಸಿಂಗ್ ಅವರನ್ನೊಳಗೊಂಡ ತಂಡವು ಅಮೋಘ ಸಾಧನೆ ಮಾಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.ಭಾರತೀಯ ತ್ರಿವಳಿ ಶೂಟರ್‌ಗಳ ತಂಡವು ಒಟ್ಟಾರೆಯಾಗಿ 1659 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆಯಿತು. ಭಾರತದ ರವೀಂದರ್ ಸಿಂಗ್ 559 ಅಂಕ ಗಳಿಸಿ ತಂಡದ ಪರ ಗರಿಷ್ಠ ಸಾಧನೆ ಮಾಡಿದರೆ, ಪ್ರಸಿದ್ಧ ಶೂಟರ್ ಸೌರಭ್ ಚೌಧರಿ 551 ಹಾಗೂ ಅಮನ್‌ಪ್ರೀತ್ ಸಿಂಗ್ 549 ಅಂಕಗಳನ್ನು ಕೊಡುಗೆಯಾಗಿ ನೀಡಿದರು.ಈ ವಿಭಾಗದಲ್ಲಿ ಚೀನಾದ ಝಾಂಗ್ ಬೊಂಗ್ಚೆನ್, ಲ್ಯು ಜುನಿ ಮತ್ತು ಫೆಂಗ್ ಲಿನ್ಲಾಂಗ್ (1648 ಅಂಕಗಳು) ಬೆಳ್ಳಿ ಪದಕ ಪಡೆದರೆ, ದಕ್ಷಿಣ ಕೊರಿಯಾದ ಹಾಂಗ್ ಸುಹಿಯೊನ್, ಚೋ ಬೊರಾಮ್ ಮತ್ತು ಸೋ ಸೆಯುಂಗ್ ಸೊಬ್ (1643 ಅಂಕಗಳು) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.ವೈಯಕ್ತಿಕ ವಿಭಾಗದಲ್ಲಿ ರವೀಂದರ್‌ಗೆ ಬೆಳ್ಳಿ:ತಂಡದ ಚಿನ್ನದ ಜೊತೆಗೆ ವೈಯಕ್ತಿಕ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ರವೀಂದರ್ ಸಿಂಗ್ 559 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ರಷ್ಯಾದ ಆಂಟನ್ ಅರಿಸ್ಟಾರ್ಖೋವ್ (561 ಅಂಕ) ಚಿನ್ನದ ಪದಕ ಗೆದ್ದರೆ, ರೊಮೇನಿಯಾದ ಲುಕಾ ಜೋಲ್ಡಿಯಾ (558 ಅಂಕ) ಕಂಚಿನ ಪದಕ ಪಡೆದರು. ಪ್ರಸ್ತುತ ಪಟ್ಟಿಯಲ್ಲಿ ಭಾರತವು ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಅಗ್ರಸ್ಥಾನದಲ್ಲಿದೆ.
ಸಂಬಂಧಿತ ಸುದ್ದಿಗಳು

ನಾಳೆ ಪಂದ್ಯಕ್ಕೆ ಡೆವೊನ್ ಕಾನ್ವೇ ಅಲಭ್ಯ?
ಆಕ್ಲೆಂಡ್ : ಭಾರತ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಿಂದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಹೊರಗುಳ…
◷ 03/11/2026
ಮೈಸೂರಿನಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಅದ್ಧೂರಿ ಚಾಲನೆ
ರಾಜ್ಯದ 1,120ಕ್ಕೂ ಹೆಚ್ಚು ಆಟಗಾರರ ಸಮಾಗಮ : ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರಿಂದಲೂ ಸ್ಪರ್ಧೆ
◷ 03/11/2026
ಭಾರತ-ಪಾಕಿಸ್ತಾನ 2027 ಏಕದಿನ ವಿಶ್ವಕಪ್ ಪಂದ್ಯಕ್ಕೆ ಭಾರೀ ಕ್ರೇಜ್
ಟಿಕೆಟ್ ಗಾಗಿ ಹರಿದುಬಂತು 84 ಲಕ್ಷ ಅರ್ಜಿ!
◷ 03/11/2026
ಬಳ್ಳೂರು ಟಿಪ್ಪರ್ ಅಪಘಾತ: ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಶಾಯನ್ ಚಿಕಿತ್ಸೆ ಫಲಿಸದೆ ಸಾವು
ಮೂವರು ಆರೋಪಿಗಳ ಬಂಧನ
◷ 03/11/2026
