ತಾಂತ್ರಿಕವಾಗಿ ಸಶಕ್ತಗೊಂಡ ಸೇನೆ ನಿರ್ಮಿಸಲು ಕೇಂದ್ರ ಸರ್ಕಾರ ಬದ್ಧ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ

ರಾಜಸ್ಥಾನ್ : ಇಲ್ಲಿನ ಜೈಸಲ್ಮೇರ್ ನಲ್ಲಿ ನಡೆದ ರಕ್ಷಣಾ ಸಚಿವಾಲಯದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದರು. 'ಭಾರತೀಯ ರಕ್ಷಣಾ ಪಡೆಗಳ ಆಧುನಿಕೀಕರಣ' ಎಂಬ ವಿಷಯದ ಕುರಿತು ಈ ಸಭೆ ಜರುಗಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ತಾಂತ್ರಿಕವಾಗಿ ಸಶಕ್ತಗೊಂಡ ಸೇನೆಯನ್ನು ನಿರ್ಮಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು. 2029ರ ವೇಳೆಗೆ ದೇಶದ ರಕ್ಷಣಾ ಉತ್ಪಾದನೆಯನ್ನು 3 ಲಕ್ಷ ಕೋಟಿ ರೂಪಾಯಿಗೆ ಹಾಗೂ ರಕ್ಷಣಾ ರಫ್ತನ್ನು 50,000 ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಅವರು ತಿಳಿಸಿದರು.
ಸಂಬಂಧಿತ ಸುದ್ದಿಗಳು

Technology
ಕಾರ್ಯತಂತ್ರದ ಹಿತಾಸಕ್ತಿಗಳೊಂದಿಗೆ ರಾಜಿಯಿಲ್ಲ
ಭಾರತದಲ್ಲೇ ಸುರಂಗ ಕೊರೆಯುವ ಯಂತ್ರ ತಯಾರಿಕೆ : ಪಿಯೂಷ್ ಗೋಯಲ್
◷ 03/11/2026
Technology
ಆದಿತ್ಯ-L1: ಸೌರ ಸ್ಫೋಟಗಳು ಏಕರೂಪವಾಗಿಲ್ಲ
ಹೊಸ ಅಧ್ಯಯನದಿಂದ ಬಹಿರಂಗ!
◷ 03/11/2026
Crime
ಬಳ್ಳೂರು ಟಿಪ್ಪರ್ ಅಪಘಾತ: ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಶಾಯನ್ ಚಿಕಿತ್ಸೆ ಫಲಿಸದೆ ಸಾವು
ಮೂವರು ಆರೋಪಿಗಳ ಬಂಧನ
◷ 03/11/2026
Politics
ಸ್ಟಿಂಗ್ ಆಪರೇಷನ್ ಪ್ರಕರಣ ಇಡೀ ಕರ್ನಾಟಕಕ್ಕೆ ದೊಡ್ಡ ಕಳಂಕ : ಕೆ.ಎನ್.ರಾಜಣ್ಣ ಬೇಸರ
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಇಡೀ ಕರ್ನಾಟಕಕ್ಕೆ ದೊಡ್ಡ ಕಳಂಕ ತಂದಿಟ್ಟ…
◷ 03/11/2026
