Wednesday, May 6, 2026
Google search engine

Homeಸ್ಥಳೀಯವಿರೋಧ ಪಕ್ಷಗಳಿಗೆ ತಂತ್ರವಿಲ್ಲ, ಕುತಂತ್ರ ಮಾತ್ರ : ಸಿದ್ದರಾಮಯ್ಯ

ವಿರೋಧ ಪಕ್ಷಗಳಿಗೆ ತಂತ್ರವಿಲ್ಲ, ಕುತಂತ್ರ ಮಾತ್ರ : ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಐದು ವರ್ಷಗಳ ಮುಖ್ಯಮಂತ್ರಿ ಸ್ಥಾನದ ಅವಧಿಯ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಪಕ್ಷ ಐದು ವರ್ಷ ಪೂರ್ಣಗೊಳಿಸುತ್ತದೆ, ಆದರೆ ನನ್ನ ಸ್ಥಾನದ ಕುರಿತು ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದರಂತೆ ನಡೆಯುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ದೆಹಲಿ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ಹೈಕಮಾಂಡ್ ಕರೆದರೆ ಅಥವಾ ರಾಹುಲ್ ಗಾಂಧಿ ಅಪಾಯಿಂಟ್‌ಮೆಂಟ್ ನೀಡಿದರೆ ಸಂಪುಟ ಪುನರಚನೆ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸಲು ತೆರಳುವುದಾಗಿ ಹೇಳಿದ್ದಾರೆ. ಇದುವರೆಗೆ ಯಾವುದೇ ಅಪಾಯಿಂಟ್‌ಮೆಂಟ್ ಕೇಳಿಲ್ಲ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಪರ ಜನಾಭಿಪ್ರಾಯ ಇರುವುದರಿಂದ ಚುನಾವಣೆಗಳನ್ನು ತಕ್ಷಣದಲ್ಲಿ ನಡೆಸುವುದಾಗಿ ಘೋಷಿಸಿದರು. ವಿರೋಧ ಪಕ್ಷಗಳ ತಂತ್ರಗಳನ್ನು ತಳ್ಳಿಹಾಕಿದ ಅವರು, ವಿರೋಧ ಪಕ್ಷಗಳಿಗೆ ಯಾವುದೇ ತಂತ್ರಗಳಿಲ್ಲ, ಕೇವಲ ಕುತಂತ್ರಗಳು ಮಾತ್ರ ಎಂದು ವ್ಯಂಗ್ಯವಾಡಿದರು.

RELATED ARTICLES
- Advertisment -
Google search engine

Most Popular