ನವದೆಹಲಿ : ಭಾರತ ಮತ್ತು ಸೆಶೆಲ್ಸ್ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಸೆಶೆಲ್ಸ್ ಪ್ರೆಸಿಡೆಂಟ್ ಹರ್ಮಿನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಷ್ಠಿತ ‘ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್’ (Guardian of the Blue Horizon) ಉಪಾದಿಯನ್ನು ನೀಡಿ ಗೌರವಿಸಿದ್ದಾರೆ.
ಸಾಗರ ಸುರಕ್ಷತೆ, ಕರಾವಳಿ ಭದ್ರತೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಸುಸ್ಥಿರ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರು ನೀಡಿದ ಮಹತ್ತರ ಕೊಡುಗೆ ಹಾಗೂ ನಾಯಕತ್ವವನ್ನು ಶ್ಲಾಘಿಸಿ ಸೆಶೆಲ್ಸ್ ಸರ್ಕಾರ ಈ ಅತ್ಯುನ್ನತ ಗೌರವವನ್ನು ಸಮರ್ಪಿಸಿದೆ.
ಭಾರತವು ತನ್ನ ‘ಸಾಗರ್’ (SAGAR – Security and Growth for All in the Region) ನೀತಿಯಡಿ ಹಿಂದೂ ಮಹಾಸಾಗರದ ನೆರೆಹೊರೆಯ ದೇಶಗಳಿಗೆ ನಿರಂತರವಾಗಿ ರಕ್ಷಣಾತ್ಮಕ ಮತ್ತು ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿರುವುದಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.



