Monday, June 29, 2026
Google search engine

Homeಅಪರಾಧಅಡಿಕೆ ತೋಟಕ್ಕೆ ಕಳ್ಳರ ಸರಣಿ ದಾಳಿ : ಮೂರು ದಿನದಲ್ಲಿ 390 ಅಡಿಕೆ ಮರಗಳ ಹೋಂಬಾಳೆ...

ಅಡಿಕೆ ತೋಟಕ್ಕೆ ಕಳ್ಳರ ಸರಣಿ ದಾಳಿ : ಮೂರು ದಿನದಲ್ಲಿ 390 ಅಡಿಕೆ ಮರಗಳ ಹೋಂಬಾಳೆ ಕಳವು

ಮೈಸೂರು : ಮೈಸೂರು ಸಮೀಪದ ಕಳಲವಾಡಿ ಗ್ರಾಮದ ರೈತ ರವೀಂದ್ರರೆಡ್ಡಿ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಕಳ್ಳರು ಸರಣಿ ಕೃತ್ಯ ಎಸಗಿ, ಮೂರು ದಿನಗಳಲ್ಲಿ ಸುಮಾರು 390 ಅಡಿಕೆ ಮರಗಳ ಹೋಂಬಾಳೆ ಕತ್ತರಿಸಿ ಕೊಂಡೊಯ್ದಿರುವ ಘಟನೆ ನಡೆದಿದೆ.

ಮೊದಲಿಗೆ ಶುಕ್ರವಾರ ರಾತ್ರಿ ಕಳ್ಳರು ತೋಟಕ್ಕೆ ನುಗ್ಗಿ ಸುಮಾರು 200 ಮರಗಳ ಹೋಂಬಾಳೆ ಕತ್ತರಿಸಿದ್ದರು. ಘಟನೆ ಬಳಿಕ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಕಳ್ಳರ ಕೃತ್ಯ ನಿಲ್ಲದೆ, ಶನಿವಾರ ರಾತ್ರಿ ಮತ್ತೊಮ್ಮೆ ಸುಮಾರು 100 ಮರಗಳ ಹಾಗೂ ಭಾನುವಾರ ರಾತ್ರಿ 90 ಮರಗಳ ಹೋಂಬಾಳೆ ಕತ್ತರಿಸಿ ಪರಾರಿಯಾಗಿದ್ದಾರೆ.

ಈ ಘಟನೆಯಿಂದ ರೈತ ರವೀಂದ್ರರೆಡ್ಡಿ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಮುಂದಿನ ಅಡಿಕೆ ಇಳುವರಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಸ್ಥಳೀಯರ ಪ್ರಕಾರ, ಕಳುವಾದ ಹೋಂಬಾಳೆಗಳನ್ನು ಮದುವೆ ಹಾಗೂ ಇತರ ಸಮಾರಂಭಗಳ ಅಲಂಕಾರಕ್ಕೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಕಳ್ಳತನದ ವಸ್ತುಗಳನ್ನು ಖರೀದಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಗ್ರಾಮದಲ್ಲಿ ರಾತ್ರಿ ಗಸ್ತು ಬಿಗಿಗೊಳಿಸುವ ಭರವಸೆ ನೀಡಿದ್ದಾರೆ

RELATED ARTICLES
- Advertisment -
Google search engine

Most Popular