Monday, June 29, 2026
Google search engine

Homeರಾಜ್ಯಸುದ್ದಿಜಾಲನಶಾ ಮುಕ್ತ ಕರ್ನಾಟಕ ಮಾಡುವಲ್ಲಿ ಮಕ್ಕಳ ಸಹಭಾಗಿತ್ವ ಸಹಕಾರ ತುಂಬಾ ಅಗತ್ಯ: ಡಾ. ಶೋಭರಾಣಿ ವಿ....

ನಶಾ ಮುಕ್ತ ಕರ್ನಾಟಕ ಮಾಡುವಲ್ಲಿ ಮಕ್ಕಳ ಸಹಭಾಗಿತ್ವ ಸಹಕಾರ ತುಂಬಾ ಅಗತ್ಯ: ಡಾ. ಶೋಭರಾಣಿ ವಿ. ಜೆ.

ಮಂಡ್ಯ : ಮಾದಕ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯವನ್ನು ಹಾಗೂ ಕುಟುಂಬ ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ. ಮಾದಕ ವಸ್ತು ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಎಲ್ಲಾ ಮಕ್ಕಳ ಸಹಭಾಗಿತ್ವ ಸಹಕಾರಿಯಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶೋಭಾರಾಣಿ ವಿ.ಜೆ ರವರು ತಿಳಿಸಿದರು.

 ಇಂದು ಮಂಡ್ಯ ನಗರದ ಜೆ.ಸಿ.ವೃತ್ತ ದಲ್ಲಿ  ನಡೆದ ಜಿಲ್ಲಾ ಪೋಲಿಸ್,ಮಂಡ್ಯ ಉಪವಿಭಾಗ ಇವರ ವತಿಯಿಂದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣಿ ಮತ್ತು ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ತಮ್ಮ ಸುತ್ತಮುತ್ತಲಿನಲ್ಲಿ ಹಾಗೂ ಸ್ನೇಹಿತರು ಮಾದಕ ವಸ್ತು ಸೇವನೆ ಮಾಡುತ್ತಿರುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಮತ್ತು ಮಾದಕ ದ್ರವ್ಯ ಸೇವನೆ ಮಾಡುವುದರಿಂದ ಆಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಪೋಲಿಸ್ ತಿಮ್ಮಯ್ಯ, ಡಿವೈಎಸ್ಪಿ.ಲಕ್ಷ್ಮೀನಾರಯಣ್, ಅಧಿಕಾರಿಗಳಾದ ಸಿ.ಪಿ.ಐ.ಸಿದ್ದರಾಜು ಎಸ್.ಐ. ಮಣಿ, ಸವಿತಾ ಪಾಟೀಲ್,ಟ್ರಾ ಫಿಕ್ ಪೋಲಿಸ್ ಮೋಹನ್ ಕುಮಾರ್, ಗಿರೀಶ್ ರವರು  ಹಾಜರಿದ್ದರು.

RELATED ARTICLES
- Advertisment -
Google search engine

Most Popular