Wednesday, May 6, 2026
Google search engine

Homeರಾಜಕೀಯವಿಜಯ್ ರಾಜ್ಯಪಾಲರ ಭೇಟಿ : ಕಾಂಗ್ರೆಸ್ ಬೆಂಬಲ ಪತ್ರ ಸಲ್ಲಿಕೆ

ವಿಜಯ್ ರಾಜ್ಯಪಾಲರ ಭೇಟಿ : ಕಾಂಗ್ರೆಸ್ ಬೆಂಬಲ ಪತ್ರ ಸಲ್ಲಿಕೆ

ಚೆನ್ನೈ :  ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ನಟ ರಾಜಕೀಯ ನಾಯಕ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಇದೀಗ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದೆ.

ಇಂದು ಟಿವಿಕೆ ಮುಖ್ಯಸ್ಥ ವಿಜಯ್ ಚೆನ್ನೈನ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನ ಭೇಟಿಯಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಕಾಂಗ್ರೆಸ್ ಬೆಂಬಲ ಪತ್ರವನ್ನ ರಾಜ್ಯಪಾಲರಿಗೆ ಸಲ್ಲಿಸಿದರು.

ಈಗಾಗಲೇ ಟಿವಿಕೆ ಪಕ್ಷ ಸರ್ಕಾರ ರಚನೆಗೆ ಕಾಂಗ್ರೆಸ್ ಅಧಿಕೃತವಾಗಿ ಬೆಂಬಲ ನೀಡಿದ್ದು ಈ ಮೂಲಕ 113 ಸ್ಥಾನಗಳಾಗಲಿವೆ. ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 118 ಆಗಿದೆ. ಹೀಗಾಗಿ ಉಳಿದ 5 ಸ್ಥಾನಗಳಿಗೆ ಯಾರು ಬೆಂಬಲ ನೀಡಲಿದ್ದಾರೆಂಬುದನ್ನ ಕಾದು ನೋಡಬೇಕಿದೆ.

RELATED ARTICLES
- Advertisment -
Google search engine

Most Popular