Sunday, May 10, 2026
Google search engine

Homeದೇಶವಿಜಯ್‌ ಪ್ರಮಾಣವಚನ: ನಟಿ ತ್ರಿಷಾ ಮಿಂಚಿಂಗ್‌!

ವಿಜಯ್‌ ಪ್ರಮಾಣವಚನ: ನಟಿ ತ್ರಿಷಾ ಮಿಂಚಿಂಗ್‌!

ಚೆನ್ನೈ: ಹಲವಾರು ವಿಘ್ನಗಳನ್ನ ಎದುರಿಸಿ ಕಡೆಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಇಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಐತಿಹಾಸಿಕ ಸಮಾರಂಭದಲ್ಲಿ ರಾಜಕೀಯ ಗಣ್ಯರಷ್ಟೇ ಅಲ್ಲದೆ, ಚಿತ್ರರಂಗದ ತಾರೆಯರ ದಂಡೇ ಹರಿದು ಬಂದಿತ್ತು. ಈ ಪೈಕಿ ವಿಜಯ್ ಅವರ ಆಪ್ತ ಗೆಳತಿ ಹಾಗೂ ನಟಿ ತ್ರಿಷಾ ಕೃಷ್ಣನ್ ಎಲ್ಲರ ಗಮನ ಸೆಳೆದರು. Vijay’s oath-taking: Actress Trisha stuns

ನಟಿ ತ್ರಿಷಾ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದ್ದರು. ನೀಲಿ ಬಣ್ಣದ ರೇಷ್ಮೆ ಸೀರೆ ಧರಿಸಿ, ಮಲ್ಲಿಗೆ ಮುಡಿದು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದ ತ್ರಿಷಾ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ತ್ರಿಷಾ ಅವರು ಅಭಿಮಾನಿಗಳತ್ತ ಕೈಬೀಸಿ ನಗುತ್ತಾ ಸಾಗಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ

RELATED ARTICLES
- Advertisment -
Google search engine

Most Popular