Sunday, April 19, 2026
Google search engine

Homeರಾಜ್ಯಸುದ್ದಿಜಾಲನಾಳೆ ಅಕ್ಷಯ ತೃತೀಯ: ಇಲ್ಲಿದೆ ಪೂಜೆ & ಚಿನ್ನ ಖರೀದಿ ಶುಭ ಮುಹೂರ್ತದ ಮಾಹಿತಿ

ನಾಳೆ ಅಕ್ಷಯ ತೃತೀಯ: ಇಲ್ಲಿದೆ ಪೂಜೆ & ಚಿನ್ನ ಖರೀದಿ ಶುಭ ಮುಹೂರ್ತದ ಮಾಹಿತಿ

ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಕ್ಷಯ ತೃತೀಯ ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಅಕ್ಷಯ ತೃತೀಯ ದಿನ ಜನರು ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ಯಾವುದೇ ಮುಹೂರ್ತ ನೋಡದೆ ಮಾಡುತ್ತಾರೆ. ಈ ದಿನ ಚಿನ್ನ ಮತ್ತು ಬೆಳ್ಳಿ ಖರೀದಿಸುವುದಕ್ಕೂ ವಿಶೇಷ ಮಹತ್ವವಿದೆ.

ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ವಿವಿಧ ನಗರಗಳಲ್ಲಿ ಪೂಜೆ ಮತ್ತು ಚಿನ್ನ ಖರೀದಿಗೆ ಇರುವ ಶುಭ ಮುಹೂರ್ತಗಳ ಪಟ್ಟಿ ಇಲ್ಲಿದೆ. ಅಕ್ಷಯ ತೃತೀಯದ ಪೂಜಾ ಮುಹೂರ್ತವು ನಾಳೆ ಬೆಳಿಗ್ಗೆ 10:49ಕ್ಕೆ ಪ್ರಾರಂಭವಾಗಲಿದೆ. ದ್ರಿಕ್ ಪಂಚಾಂಗದ ಪ್ರಕಾರ ಪ್ರಮುಖ ನಗರಗಳಲ್ಲಿ ಪೂಜಾ ಮುಹೂರ್ತದ ಸಮಯ ಹೀಗಿದೆ:

ಬೆಂಗಳೂರು: ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:19ರ ವರೆಗೆ.
ಮುಂಬೈ: ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:38ರ ವರೆಗೆ.
ಪುಣೆ: ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:34ರ ವರೆಗೆ.
ದೆಹಲಿ: ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:20ರ ವರೆಗೆ.
ಕೋಲ್ಕತ್ತಾ: ಬೆಳಿಗ್ಗೆ 10:49 ರಿಂದ ಬೆಳಿಗ್ಗೆ 11:36ರ ವರೆಗೆ.
ಹೈದರಾಬಾದ್: ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:15ರ ವರೆಗೆ.

ನಾಲೆ ವಿಶೇಷವಾಗಿ ಚಿನ್ನ ಖರೀದಿಯ ಮುಹೂರ್ತವನ್ನ ನೋಡುವುದಾರೆ, ಚಿನ್ನ ಖರೀದಿಸಲು ಇಂದು ಬೆಳಿಗ್ಗೆ 10:49 ರಿಂದ ಪ್ರಾರಂಭವಾಗಿ ನಾಳೆ 5:51 ರವರೆಗೆ ಸುದೀರ್ಘ ಶುಭ ಸಮಯವಿದೆ.
ಇದೇ ದಿನ ಲಕ್ಷ್ಮಿ ದೇವಿಯು ಕುಬೇರನಿಗೆ ಸಂಪತ್ತಿನ ಒಡೆಯನಾಗುವ ವರ ನೀಡಿದ್ದಳು ಎಂಬ ನಂಬಿಕೆ ಇದೆ.

RELATED ARTICLES
- Advertisment -
Google search engine

Most Popular