Monday, March 23, 2026
Google search engine

Homeರಾಜ್ಯಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಂಡ ಬಳಿಕ ಮಂಗಳೂರು ತಲುಪಿದ ರಶ್ಯದ ತೈಲ ಟ್ಯಾಂಕರ್

ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಂಡ ಬಳಿಕ ಮಂಗಳೂರು ತಲುಪಿದ ರಶ್ಯದ ತೈಲ ಟ್ಯಾಂಕರ್

ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಂಡ ಬಳಿಕ ರಶ್ಯದ ತೈಲ ಟ್ಯಾಂಕರ್ ವೊಂದು ರವಿವಾರ ಮಂಗಳೂರು ತಲುಪಿದೆ.
‘ಆಕ್ವಾ ಟೈಟಾನ್’ (Aqua Titan) ಹೆಸರಿನ ಈ ಹಡಗು ಮೂಲತಃ ಚೀನಾಕ್ಕೆ ತೆರಳಬೇಕಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚರಿಸುತ್ತಿದ್ದ ತೈಲ ಸಾಗಾಟದ ಈ ಬೃಹತ್ ಹಡಗು ಕಳೆದ ವಾರದ ಆರಂಭದಲ್ಲಿ ಅಲ್ಲಿಂದ ಯು-ಟರ್ನ್ ಪಡೆದು ಭಾರತದತ್ತ ಮುಖ ಮಾಡಿತ್ತು.
ಇದೇ ವೇಳೆ, ಅಮೆರಿಕದ ಟೆಕ್ಸಾಸ್ ನಿಂದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಹೊತ್ತ ‘ಪಿಕ್ಸಿಸ್ ಪಯೋನೀರ್’ (Pyxis Pioneer) ಎಂಬ ಸರಕು ನೌಕೆಯೂ ಇಂದು ನವ ಮಂಗಳೂರು ಬಂದರಿಗೆ ಆಗಮಿಸಿದೆ.ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿರುವ ಮಧ್ಯೆ ಇರಾನ್ ಹಾರ್ಮುಝ್ ಜಲಸಂಧಿ ಮುಚ್ಚಿದ್ದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಧನ ಪೂರೈಕೆಯ ಮೇಲೆ ಭಾರೀ ಹೊಡೆತ ಬಿದ್ದಿದೆ.

RELATED ARTICLES
- Advertisment -
Google search engine

Most Popular