ಚಾಮರಾಜನಗರ: ಶೃಂಗೇರಿ ಗುರು ಪರಂಪರೆ ಭಾರತೀಯ ಸನಾತನ ಧರ್ಮದ ಶ್ರೇಷ್ಠತೆಯ ಸಂಕೇತ. ವಿಶ್ವಕ್ಕೆ ಆಧ್ಯಾತ್ಮದ ಮಹತ್ವ ಸಾರುವ ಮೂಲಕ ಗುರು ಶಿಷ್ಯ ಪರಂಪರೆಯನ್ನು ಸ್ಥಾಪಿಸಿದೆ. ಭಾರತೀಯ ಧರ್ಮ , ಪರಂಪರೆ, ಧರ್ಮ ಗ್ರಂಥಗಳ ಅಧ್ಯಯನ, ಆಧ್ಯಾತ್ಮಿಕ ಚಿಂತನೆಗಳ ಸಮಗ್ರವಾದ ಅನುಷ್ಠಾನ, ತಿಳುವಳಿಕೆಗೆ ಮಾದರಿ ಎಂದು ಸಂಸ್ಕೃತಿ ಚಿಂತಕರು ಹಾಗೂ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಋಗ್ವೇದಿ ಕುಟೀರದಲ್ಲಿ ಶ್ರೀ ಶಂಕರ ಅಭಿಯಾನಂ ಕರ್ನಾಟಕ , ಶ್ರೀ ಶಾರದಾ ಭಜನಾ ಮಂಡಳಿ, ಜೈಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಶ್ರೀ ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸನ್ನಿ ಧಾನಂಗಳವರ 76ನೇ ವರ್ಧಂತಿ ಮಹೋತ್ಸವದಲ್ಲಿ ಉಪನ್ಯಾಸ ನೀಡಿ ಶೃಂಗೇರಿ ಪರಂಪರೆಗೆ ವಿಶೇಷವಾದ ವಿಶ್ವ ಗೌರವ ಇದೆ. ವಿಶ್ವದ ಧಾರ್ಮಿಕ ಚಿಂತಕರು, ಆಧ್ಯಾತ್ಮ ಹಾಗೂ ಮಾನವ ಜನ್ಮದ ಸಾರ್ಥಕತೆಗೆ ಸಾಗುವ ದಿಕ್ಕಿನಲ್ಲಿ ಮಾರ್ಗದರ್ಶನ ಹಾಗೂ ದಿವ್ಯ ಚಿಂತನೆಗಳನ್ನು ಸರ್ವ ಭಕ್ತರಿಗೆ ನೀಡುವ ಮೂಲಕ ಗುರು ಪರಂಪರೆ ಮಾದರಿಯಾಗಿದೆ. ಕೋಟಿ ಕೋಟಿ ಭಕ್ತರ ಆರಾಧ್ಯ ಕೇಂದ್ರವಾಗಿರುವ ಶೃಂಗೇರಿ ಪರಂಪರೆ ಆದಿಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟು ಅವಿಚ್ಛಿನ್ನವಾಗಿ ವಾಗಿ 36 ಗುರು ಪರಂಪರೆಯನ್ನು ಹೊಂದಿರುವುದನ್ನು ನೋಡಬಹುದು. ಶೃಂಗೇರಿ ಗುರು ಪರಂಪರೆ ಮಾದರಿ. ಶೃಂಗೇರಿಯನ್ನು ಆಧ್ಯಾತ್ಮ ಶ್ರೇಷ್ಠತೆಯಿಂದ ವಿಶ್ವಕ್ಕೆ ಆದರ್ಶವಾಗಿ ರೂಪಿಸಿದ್ದಾರೆ.
ಭಾರತೀಯ ಸನಾತನ ಧರ್ಮ ಉಳಿಯುವ ದಿಕ್ಕಿನಲ್ಲಿ ಸದಾ ಕಾಲ ಮಾರ್ಗದರ್ಶನ ನೀಡುತ್ತಿರುವ ಶೃಂಗೇರಿ ಶಂಕರ ಮಠದ ಗುರು ಪರಂಪರೆಗೆ ಸದಾ ಕಾಲ ಭಕ್ತರು. ನಿಷ್ಠರಾಗಿದ್ದಾರೆ . ಅಪಾರ ಪಾಂಡಿತ್ಯ ,ಜ್ಞಾನ ,ಚಿಂತನೆ ಬಹುಭಾಷಾ ಅಧ್ಯಯನ ಹಾಗೂ ಸಮಗ್ರವಾದ ಅಭಿವೃದ್ಧಿಯ ದಿಕ್ಕಿನಲ್ಲಿ ಶೃಂಗೇರಿಯನ್ನು ಅಭಿವೃದ್ಧಿಪಡಿಸುತ್ತಿದೆ. ಇಡೀ ದೇಶದ ಎಲ್ಲೆಡೆ ಸದ್ಭಕ್ತರನ್ನು ಹೊಂದಿರುವ ಶೃಂಗೇರಿ ಶ್ರೀ ಶಾರದಾಪೀಠ ಆಧ್ಯಾತ್ಮದ ಮಹತ್ವ ತಿಳಿಸುವ ಪೀಠವಾಗಿದೆ
ಶ್ರೀ ಭಾರತಿ ತೀರ್ಥರು 76ನೇ ವರ್ಧಂತಿಯ ಸಂದರ್ಭದಲ್ಲಿ ಆಶೀರ್ವದಿಸುತ್ತಿರುವುದು ನಮ್ಮೆಲ್ಲರ ಪುಣ್ಯವೆಂದರು.
ಶ್ರೀ ಶಾರದಾ ಭಜನಾ ಮಂಡಳಿಯ ಅಧ್ಯಕ್ಷರಾದ ವಿಜಯಲಕ್ಷ್ಮಿ ರವರು ಮಾತನಾಡಿ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಭಾರತದಲ್ಲಿ 1,200 ವರ್ಷಗಳ ಹಿಂದೆ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಮಠಗಳನ್ನು ಸ್ಥಾಪಿಸಿ ಭಾರತೀಯ ಧರ್ಮವನ್ನು ಉಳಿಸಿ ಬೆಳೆಸಿ ಭಾರತೀಯರು ಮಹಾ ಗ್ರಂಥಗಳ , ಪುರಾಣಗಳ ಆಧ್ಯಾತ್ಮ ಗ್ರಂಥಗಳ ತಿಳುವಳಿಕೆಗೆ. ಹಾಗೂ ಮಾನವ ಜನ್ಮವನ್ನು ಸಾರ್ಥಕಗೊಳಿಸುವ ಮಾರ್ಗದರ್ಶನ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ. ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಸರಸ್ವತಿ, ನಾಗಸುಂದರ್, ಮಾಲಾ, ಪವಿತ್ರ, ಶ್ರಾವ್ಯ ಇದ್ದರು.



