ನವದೆಹಲಿ: ಇತ್ತೀಚೆಗೆ ತಮ್ಮ ಡಿವೋರ್ಸ್ ವಿಚಾರವಾಗಿ ಭಾರಿ ಸುದ್ದಿಯಾಗಿದ್ದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಯಜುವೇಂದ್ರ ಚಹಲ್ ಇದೀಗ ಮತ್ತೊಂದು ಕಾರಣಕ್ಕಾಗಿ ಭಾರಿ ಚರ್ಚೆಗೆ ಕಾರಣರಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026 ಟೂರ್ನಿಯಲ್ಲಿ ಪಾಲ್ಗೊಂಡಿರುವ ಚಹಲ್ ಇದರ ನಡುವೆಯೇ ವಿವಾದವೊಂದನ್ನು ಎಳೆದುಕೊಂಡಿದ್ದಾರೆ. ಇವರಿಗೆ ಸಂಬಂಧಿಸಿದ ವಿಡಿಯೋವೊಂದು ನಿನ್ನೆ ರಾತ್ರಿಯಿಂದ ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ಗಳಲ್ಲಿ ಹರಿದಾಡುತ್ತಿದ್ದು ಭಾರಿ ವಿರೋದ ವ್ಯಕ್ತವಾಗಿದೆ.
ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು, ಚಲಿಸುತ್ತಿದ್ದ ಕಾರಿನಿಂದ ಧೂಮಪಾನ ಮಾಡಿ, ಸಿಗರೇಟ್ ತುಂಡನ್ನು ರಸ್ತೆಗೆ ಎಸೆದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಭಾರೀ ಟೀಕೆ ಮಾಡುತ್ತಿದ್ದಾರೆ.
ಆದಾಗ್ಯೂ, ಈ ವಿಡಿಯೋ ನಿಜವೋ ಅಥವಾ ಅಲ್ಲಿರುವುದು ಬೇರೆಯವರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಈ ಬಗ್ಗೆ ಯಜುವೇಂದ್ರ ಚಹಲ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಈ ವಿಡಿಯೋ ಅಸಲಿಯೇ ನಕಲಿಯೃ ಎಂಬ ಬಗ್ಗೆ ತೀವ್ರ ಗೊಂದಲ ಸೃಷ್ಟಿಯಾಗಿದೆ.



