Tuesday, April 21, 2026
Google search engine

Homeರಾಜ್ಯಸುದ್ದಿಜಾಲಆದಿ ಶಂಕರಾಚಾರ್ಯರ ತತ್ವಗಳಿಂದ ಮಾನವ ಕಲ್ಯಾಣ ಸಾಧ್ಯ-ಸುರೇಶ್ ಎನ್ ಋಗ್ವೇದಿ

ಆದಿ ಶಂಕರಾಚಾರ್ಯರ ತತ್ವಗಳಿಂದ ಮಾನವ ಕಲ್ಯಾಣ ಸಾಧ್ಯ-ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಆದಿ ಶಂಕರಾಚಾರ್ಯರು ಸಾಂಸ್ಕೃತಿಕ ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಏಕತೆಯನ್ನು ಉಂಟು ಮಾಡಿ ಭದ್ರ ಬುನಾದಿ ಹಾಕಿ ಭಾರತೀಯ ಸನಾತನ ಧರ್ಮವನ್ನು ರಕ್ಷಿಸಿದವರು ಎಂದು ಸಂಸ್ಕೃತಿ ಚಿಂತಕ,ಶ್ರೀ ಶಂಕರ ಅಭಿಯಾನಂ ಕರ್ನಾಟಕದ ಪ್ರಧಾನರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಜೈಹಿಂದ್ ಕಟ್ಟೆಯ ಋಗ್ವೇದಿ ಕುಟೀರದಲ್ಲಿ ನಡೆದ ವಿಶ್ವ ತತ್ವಜ್ಞಾನಿಗಳ ದಿನ ಹಾಗೂ ಶಂಕರ ಜಯಂತಿ ಅಂಗವಾಗಿ ಮಾತನಾಡುತ್ತಾ ಇಡೀ ಪ್ರಪಂಚಕ್ಕೆ ಅತ್ಯಂತ ಅಗತ್ಯವಾದ ಅದ್ವೈತ ಸಿದ್ದಾಂತವನ್ನು ನೀಡಿ ಮಾನವ ಎಲ್ಲಾ ಕ್ಷೇತ್ರದಲ್ಲೂ ಸಮಗ್ರವಾಗಿ ಅಭಿವೃದ್ಧಿ ಸಾಧಿಸುವ ದಿವ್ಯ ಚಿಂತನೆಗಳನ್ನು ನೀಡಿದ ಮಹಾವ್ಯಕ್ತಿ ಆದೇಶಂಕರರು ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಆದರ್ಶಪ್ರಾಯರು. ಅವರ ತತ್ವ ಸಿದ್ಧಾಂತಗಳ ಅನುಸರಣೆಯಿಂದ ಮಾನವ ಕಲ್ಯಾಣ ಸಾಧ್ಯವೆಂದು ತಿಳಿಸಿ,ಅದ್ವೈತ ಸಿದ್ದಾಂತದ ಅಹಂ ಬ್ರಹ್ಮಾಸ್ಮಿ ತತ್ವವು ವಿಶ್ವ ವ್ಯಾಪಕತೆಯನ್ನು ಹೊಂದಿದೆ ಎಂದು ತಿಳಿಸಿದರು.

ಮೈಸೂರಿನ ಗಾನ ಚಂದ್ರ ಕಲಾಬಳಗ ಅಧ್ಯಕ್ಷರು ಹಾಗೂ ಗಾಯಕರು ಇಂಜಿನಿಯರ್ ಆದ ಸುಧೀಂದ್ರರವರು ಮಾತನಾಡಿ ಆದೇಶಂ ತತ್ವಗಳು ಮತ್ತು ಅವರ ಬೋಧನೆಗಳು ಅತ್ಯಂತ ಸರಳವಾಗಿದ್ದು ಸರ್ವರೂ ಅನುಸರಿಸಬಹುದಾದ ಚಿಂತನೆಯನ್ನು ನೀಡಿದ್ದಾರೆ ಭಾರತದ ನಾಲ್ಕು ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ ಏಕತೆಯನ್ನು ಮೂಡಿಸಿದ ಆದಿಶಂಕರರ ಜಯಂತಿಯನ್ನು ಭಾರತ ಸರ್ಕಾರ ತತ್ವಜ್ಞಾನಿಗಳ ದಿನ ಎಂದು ಘೋಷಿಸಿರುವುದು ಬಹಳ ಸಂತೋಷವೆಂದು ತಿಳಿಸಿ ಋಗ್ವೇದಿ ಕುಟೀರ ದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ಜೈಹಿಂದ್ ಪ್ರತಿಷ್ಠಾನದ ಮೂಲಕ ಆಚರಿಸುವ ಮೂಲಕ ಆದರ್ಶವಾದ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಸುತೆಂದ್ರ ರವರನ್ನು ಆತ್ಮೀಯವಾಗಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಶರಣ್ಯ, ಶ್ರಾವ್ಯ,ಕಾವ್ಯ ಪೂಜಾ ಲಕ್ಷ್ಮಿ, ಐಶ್ವರ್ಯ ಮುಂತಾದವರು ಇದ್ದರು

RELATED ARTICLES
- Advertisment -
Google search engine

Most Popular