ಬೆಂಗಳೂರು : ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ. ಇಂದು ಇಬ್ಬರು ಒಂದೇ ಕಾರ್‌ನಲ್ಲಿ ವಿಧಾನಸೌಧಕ್ಕೆ ಆಗಮಿಸುವ ಮೂಲಕ ಅಚ್ಚರಿ ನಡೆ ಅನುಸರಿಸಿದರು.
ಲೋಕಭವನ ಕಾರ್ಯಕ್ರಮದಲ್ಲಿ ಸಿಎಂ-ಡಿಸಿಎಂ ತೆರಳಿದ್ರು. ಕಾರ್ಯಕ್ರಮ ಮುಗಿದ ಕೂಡಲೇ ಸಿಎಂ ಸಿದ್ದರಾಮಯ್ಯ ಕಾರ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧಕ್ಕೆ ಆಗಮಿಸಿದರು. ಅಷ್ಟೇ ಅಲ್ಲ, ಕೆಲ ಕಾಲ ಸಿಎಂ ಕಚೇರಿಯಲ್ಲಿ ಕೂತು ಚರ್ಚೆ ನಡೆಸಿದರು. ಸಿಎಂ-ಡಿಸಿಎಂ ಈ ನಡೆ ಅಚ್ಚರಿಗೆ ಕಾರಣವಾಯ್ತು.



