Thursday, May 7, 2026
Google search engine

Homeಅಪರಾಧಕಾನೂನುಮತ ತಿರುಚಿದ ಪ್ರಕರಣ: ಶಾಸಕ ಜೀವರಾಜ್‌ ಸೇರಿ ಮೂವರ ಅರ್ಜಿ ವಿಚಾರಣೆ ಜೂನ್‌ 3ಕ್ಕೆ ಮುಂದೂಡಿಕೆ

ಮತ ತಿರುಚಿದ ಪ್ರಕರಣ: ಶಾಸಕ ಜೀವರಾಜ್‌ ಸೇರಿ ಮೂವರ ಅರ್ಜಿ ವಿಚಾರಣೆ ಜೂನ್‌ 3ಕ್ಕೆ ಮುಂದೂಡಿಕೆ

ಬೆಂಗಳೂರು : ಮತ ತಿರುಚಿದ ಆರೋಪದಡಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಶೃಂಗೇರಿ ಬಿಜೆಪಿ ಶಾಸಕ ಜೀವರಾಜ್‌, ಅಂದಿನ ಜಿಲ್ಲಾಧಿಕಾರಿ ರಮೇಶ್‌ ಹಾಗೂ ಚುನಾವಣಾಧಿಕಾರಿ ವೇದಮೂರ್ತಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಜೂನ್‌ 3ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಯಿತು. ಈ ವೇಳೆ ದೂರುದಾರ ಸುಧೀರ್‌ ಕುಮಾರ್‌ ಮುರೊಳ್ಳಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಜೂ.3ರವರೆಗೆ ಸಮಯ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬಳಿಕ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಜೂನ್‌ 3 ಮುಂದೂಡಿ ನ್ಯಾಯಪೀಠ ಆದೇಶಿಸಿದೆ.

RELATED ARTICLES
- Advertisment -
Google search engine

Most Popular